ಟೆಸ್ಟ್ ತಂಡದ ನಾಯಕನಾಗುವ ಇಂಗಿತ ವ್ಯಕ್ತಪಡಿಸಿದ ಮುಹಮ್ಮದ್ ಶಮಿ

Prasthutha|

ಹೊಸದಿಲ್ಲಿ: ಟೀಮ್ ಇಂಡಿಯಾದಲ್ಲಿ ಕಳೆದ ಕೆಲ ಸಮಯದಿಂದ ನಡೆಯುತ್ತಿರುವ ನಾಯಕತ್ವ ಜಟಾಪಟಿ ಮುಂದುವರಿಯುತ್ತಿರುವಾಗಲೇ ತಂಡದ ಹಿರಿಯ ಆಟಗಾರ ಮುಹಮ್ಮದ್ ಶಮಿ, ತಾನು‌ ಕೂಡ ಭಾರತ ಟೆಸ್ಟ್ ತಂಡದ ನಾಯಕನಾಗುವ ಹಂಬಲ ವ್ಯಕ್ತಪಡಿಸಿದ್ದಾರೆ.

- Advertisement -


ಟೆಸ್ಟ್ ನಾಯಕತ್ವ ಸ್ಥಾನದಿಂದ ವಿರಾಟ್ ಕೊಹ್ಲಿ ಕೆಳಗಿಳಿದ ಬಳಿಕ ಪೂರ್ಣಾವಧಿ ನಾಯಕನ ನೇಮಕವಾಗಿಲ್ಲ. ಏಕದಿನ ತಂಡದ ನಾಯಕ ರೋಹಿತ್ ಶರ್ಮಾ ಟೆಸ್ಟ್ ತಂಡದ ನಾಯಕನಾಗಲಿದ್ದಾರೆ ಎನ್ನಲಾಗುತ್ತಿದೆಯಾದರೂ, ಕೆ.ಎಲ್.ರಾಹುಲ್ ಹಾಗೂ ರಿಷಭ್ ಪಂತ್ ಕ್ಯಾಪ್ಟನ್ಸಿ ರೇಸ್‌ನಲ್ಲಿದ್ದಾರೆ.


ಆದರೆ ಈ ನಡುವೆ ಟೆಸ್ಟ್‌ ತಂಡದ ನಾಯಕತ್ವ ವಹಿಸಿದರೆ ಜವಾಬ್ಧಾರಿ ನಿಭಾಯಿಸಲು ಸಿದ್ಧ ಎಂದು ಮುಹಮ್ಮದ್ ಶಮಿ ಹೇಳಿದ್ದಾರೆ.
ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಳ್ಳುವ ಕುರಿತ ಪ್ರಶ್ನೆಯೊಂದಕ್ಕೆ ಉತ್ತರಿಸುವ ವೇಳೆ, ‘ಪ್ರಾಮಾಣಿಕವಾಗಿ ಹೇಳುತ್ತೇನೆ, ಭಾರತ ತಂಡದ ನಾಯಕನಾಗಗಲು ಯಾರಿಗೆ ತಾನೇ ಆಸೆಯಿರಲ್ಲ ಹೇಳಿ ?” ಎಂದಿದ್ದಾರೆ.

- Advertisement -


ನಾಯಕತ್ವ ಸ್ಥಾನದ ಕುರಿತು ನಾನು ಹೆಚ್ಚು ಯೋಚಿಸುತ್ತಿಲ್ಲ. ನನಗೆ ವಹಿಸಲಾಗುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
31 ವರ್ಷದ ಶಮಿ, ಇತ್ತೀಚೆಗಷ್ಟೇ ಮುಕ್ತಾಯಗೊಂಡ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 14 ವಿಕೆಟ್ ಪಡೆದು ಮಿಂಚಿದ್ದರು.

Join Whatsapp