ಮೂಡಿಗೆರೆ: SDPI ನೂತನ ತಾಲೂಕು ಕಾರ್ಯಕಾರಿಣಿ ಸಭೆ; ನೂತನ ಸಮಿತಿ ರಚನೆ

Prasthutha|

ಚಿಕ್ಕಮಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಮುನೀರ್ ಹಾಗೂ ಜಿಲ್ಲಾ ಕೋಶಾಧಿಕಾರಿ ಖಾಲೀದ್ ಅವರ ನೇತೃತ್ವದಲ್ಲಿ 2022-24ರ ಅವಧಿಗೆ ನಡೆದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಆಂತರಿಕ ಚುನಾವಣೆಯಲ್ಲಿ ತಾಲೂಕು ಕಾರ್ಯಕಾರಿಣಿ ಸಭೆಗೆ ನೂತನ 16 ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಯಿತು.

- Advertisement -

ಮೂಡಿಗೆರೆ ವಿಧಾನಸಭಾ ಕ್ಷೇತ್ರದ ತಾಲ್ಲೂಕು ಅಧ್ಯಕ್ಷರಾಗಿ ಸಾಮಾಜಿಕ ಹೋರಾಟಗಾರ, ಜನಪರ ಚಿಂತಕ, ಯುವ ಮುಖಂಡ ಅಂಗಡಿ ಚಂದ್ರು, ಉಪಾಧ್ಯಕ್ಷರಾಗಿ ಮುಹಮ್ಮದ್ ರಫೀಕ್, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಯು. ಶರೀಫ್, ಕಾರ್ಯದರ್ಶಿಗಳಾಗಿ ಜಾವೀದ್ ಮತ್ತು ಕಿರಣ್, ಕೋಶಾಧಿಕಾರಿಯಾಗಿ ರಿಝಾನ್ ಫಲ್ಗುಣಿ ಆಯ್ಕೆಯಾಗಿದ್ದಾರೆ.

ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ನಾಗೇಶ್ ಸಾಲುಮರ, ಹನೀಫ್ ಮೂಡಿಗೆರೆ. ಫೈರೋಝ್ ಆಲ್ಲೂರು, ಶರೀಫ್ ಬಾಪುನಗರ, ರಫೀಕ್ ಬಣಕಲ್, ಜಂಶಿದ್ ಮೂಡಿಗೆರೆ, ಮುಹಮ್ಮದ್ ಅಲಿ ಅಲ್ಲೂರು, ಇಲ್ಯಾಸ್, ಅಲ್ತಾಫ್ ಹಾಗೂ ರಿಝಾನ್ ಮೂಡಿಗೆರೆ ಆಯ್ಕೆಯಾಗಿದ್ದಾರೆ ಎಂದು ಜಿಲ್ಲಾಧ್ಯಕ್ಷರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.



Join Whatsapp