ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Prasthutha|

- Advertisement -

ಬೆಂಗಳೂರು: ಮುಡಾ ಪ್ರಕರಣದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್​ನಲ್ಲಿ ನಡೆಸಲಾಗಿದೆ.

ವಾದಮಂಡನೆ ಮುಕ್ತಾಯವಾಗಿದ್ದು, ತೀರ್ಪು ಕಾಯ್ದಿರಿಸಿದೆ.

- Advertisement -

ವಿಚಾರಣೆ ವೇಳೆ ಸಿಎಂ ಪರ ವಾದ ಮಂಡಿಸಿದ ವಕೀಲ ಅಭಿಷೇಕ್ ಮನು ಸಿಂಘ್ವಿ, “ಅಭಿಯೋಜನಾ ಮಂಜೂರಾತಿಯನ್ನು ಏಕೆ ಕೊಡಲಾಗಿದೆ ಎಂಬ ಅಂಶವೇ ರಾಜ್ಯಪಾಲರ ಆದೇಶದಲ್ಲಿ ಇಲ್ಲ” ಎಂದು ಹೇಳಿದ್ದಾರೆ.

ಸಿಎಂ ಪರವಾಗಿಯೇ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌, “ಅಬ್ರಹಾಂ ಅವರ ಜೊತೆ ರಾಜ್ಯಪಾಲರು ಚರ್ಚಿಸಿದ್ದಾರೆ. ಆದರೆ, ಸ್ನೇಹಮಯಿ ಕೃಷ್ಣ ಅನುಮತಿ ಕೋರಿದರೂ ಅವರ ಜೊತೆಗಿನ ಚರ್ಚೆಯ ಕುರಿತ ಯಾವುದೇ ದಾಖಲೆ ಇಲ್ಲ. ಮತ್ತೊಬ್ಬ ದೂರುದಾರ ಪ್ರದೀಪ್‌ ಕುಮಾರ್‌ ವಿಚಾರದಲ್ಲೂ ಅದೇ ನಿಲುವನ್ನು ರಾಜ್ಯಪಾಲರು ಅನುಸರಿಸಿದ್ದಾರೆ” ಎಂದು ರವಿವರ್ಮ ಹೇಳಿದ್ದಾರೆ.



Join Whatsapp