ಪತಿಯ ಮನೆ ತೊರೆಯಲು ಯತ್ನಿಸಿದ ಮಹಿಳೆಯನ್ನು ಮರಕ್ಕೆ ನೇತುಹಾಕಿ ಮಾರಣಾಂತಿಕ ಹಲ್ಲೆ!

Prasthutha|

ಭೋಪಾಲ್‌ : ಪತಿಯ ಮನೆ ಬಿಟ್ಟು ಹೋಗಲು ಯತ್ನಿಸಿದುದಕ್ಕೆ ಮಹಿಳೆಯೊಬ್ಬಳ ಸ್ವತಃ ತಂದೆ ಮತ್ತು ಸಹೋದರರು ಆಕೆಯನ್ನು ಮರಕ್ಕೆ ನೇತು ಹಾಕಿ, ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿದೆ. ಮಧ್ಯಪ್ರದೇಶದ ಅಲಿರಾಜ್‌ ಪುರದಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದುದರಿಂದ, ವಿಷಯ ಬೆಳಕಿಗೆ ಬಂದಿದೆ.

- Advertisement -

ಅಲಿರಾಜ್‌ ಪುರದ ಬಡೇ ಪೂಲ್‌ ತಲಾವೊ ಗ್ರಾಮದಲ್ಲಿ ಜೂ. 28ರಂದು ಘಟನೆ ನಡೆದಿದೆ. ಸಂತ್ರಸ್ತ ಮಹಿಳೆ ಪಕ್ಕದ ಊರಿನ ವ್ಯಕ್ತಿಯೊಬ್ಬರನ್ನು ವಿವಾಹವಾಗಿದ್ದರು. ಆಕೆಯ ಪತಿ ಕೆಲಸಕ್ಕಾಗಿ ಗುಜರಾತ್‌ ಗೆ ತೆರಳಿದ್ದನು. ಇದರಿಂದ ಮಹಿಳೆಗೆ ಬೇಸರವಿತ್ತು. ಹೀಗಾಗಿ ಆಕೆ ಪತಿಯ ಮನೆ ತೊರೆಯಲು ನಿರ್ಧರಿಸಿದ್ದಳು.

ಇದರಿಂದ ಆಕ್ರೋಶಿತರಾದ ಮಹಿಳೆಯ ತಂದೆ ಮತ್ತು ಸಹೋದರರು ಆಕೆಯನ್ನು ಶಿಕ್ಷಿಸುವ ಉದ್ದೇಶವಾಗಿ ಭೀಕರವಾಗಿ ಹಲ್ಲೆ ನಡೆಸಿದುದಲ್ಲದೆ, ಮರಕ್ಕೆ ನೇತು ಹಾಕಿದ್ದಾರೆ. ಪೊಲೀಸರು ಘಟನೆಯ ಮಾಹಿತಿ ತಿಳಿದು ಪ್ರಕರಣ ದಾಖಲಿಸಿಕೊಂಡಿದ್ದಾರೆ.



Join Whatsapp