RJD ಮಾಜಿ ಸಂಸದ ಶಹಾಬುದ್ದೀನ್ ನಿಧನ

Prasthutha|

►ಕೊನೆಗೂ ಊಹಾಪೋಹಗಳಿಗೆ ತೆರೆ

ರಾಷ್ಟ್ರೀಯ ಜನತಾ ದಳ –ಆರ್ ಜೆಡಿ ಮಾಜಿ ಸಂಸದ ಮುಹಮ್ಮದ್ ಶಹಾಬುದ್ದೀನ್ ದೆಹಲಿಯ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ತಿಹಾರ್ ಜೈಲಿನಲ್ಲಿದ್ದ ಅವರು ಕೋವಿಡ್ 19 ಸೋಂಕಿತರಾಗಿ ಚಿಕಿತ್ಸೆಗೆ ದಾಖಲಾಗಿದ್ದರು.

- Advertisement -

ಶಹಾಬುದ್ದೀನ್ ನಿಧನರಾದ ಸುದ್ದಿಗಳು ಇಂದು ಬೆಳಗ್ಗಿನಿಂದಲೇ ಹರಿದಾಡುತ್ತಿದ್ದವು. ಆದರೆ ತಿಹಾರ್ ಜೈಲು ಅಧಿಕಾರಿಗಳು ಅದನ್ನು ನಿರಾಕರಸಿದ್ದರು. ಇದೀಗ ಆಸ್ಪತ್ರೆಯ ಮೂಲಕಗಳು ಮತ್ತು ಆರ್ ಜೆ ಡಿ ಪಕ್ಷ ಶಹಾಬುದ್ದೀನ್ ಅವರ ನಿಧನದ ಬಗ್ಗೆ ಖಚಿತಪಡಿಸಿದೆ.


ಕೋವಿಡ್ 19 ನಿಂದ ಬಳಲುತ್ತಿರುವ ಮತ್ತು ಡಿಡಿಯು ಆಸ್ಪತ್ರೆಯಲ್ಲಿ ದಾಖಲಾದ ಮಾಜಿ ಆರ್ ಜೆ ಡಿ ಸಂಸದ ಮುಹಮ್ಮದ್ ಶಹಾಬುದ್ದೀನ್ ಅವರ ಸರಿಯಾದ ವೈದ್ಯಕೀಯ ಮೇಲ್ವಿಚಾರಣೆ ಮತ್ತು ಆರೈಕೆಯನ್ನು ಖಚಿತಪಡಿಸಿಕೊಳ್ಳುವಂತೆ ದೆಹಲಿ ಹೈಕೋರ್ಟ್ ಬುಧವಾರ ಎಎಪಿ ಸರ್ಕಾರ ಮತ್ತು ಜೈಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡಿತ್ತು.

- Advertisement -