ರಮೇಶ ಜಾರಕಿಹೊಳಿ ಸಚಿವರಾಗ್ತಾರೆ: ‘ಸಿಡಿ ಸಾಹುಕಾರ್’ ಗೆ ಬೆಂಬಲ ವ್ಯಕ್ತಪಡಿಸಿದ ಸಂಸದ ಕಟೀಲ್

Prasthutha|

ಗೋಕಾಕ್ : ಅನೈತಿಕ ಸಂಬಂಧ ವಿವಾದದಲ್ಲಿ ಸಚಿವ ಸ್ಥಾನ ಕಳೆದುಕೊಂಡ ರಮೇಶ ಜಾರಕಿಹೊಳಿ ಅವರು ಮತ್ತೇ ಸಚಿವರಾಗುತ್ತಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

- Advertisement -

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ , ರಮೇಶ ಜಾರಕಿಹೊಳಿ ಮತ್ತು ನಾವು ಒಂದಾಗಿದ್ದೇವೆ. ಪಕ್ಷ ಹಾಗೂ ಸರ್ಕಾರ ಮಟ್ಟದಲ್ಲಿ ಚರ್ಚೆಯಾಗಿದೆ. ಕೆಲವು ಚುನಾವಣೆ ಸೇರಿ ಬೇರೆ ಬೇರೆ ಕಾರಣದಿಂದ ಮಂತ್ರಿ ಸ್ಥಾನ ನೀಡುವುದು ತಡವಾಗಿದೆ. ರಮೇಶ ಜಾರಕಿಹೊಳಿ ಮಂತ್ರಿಸ್ಥಾನದ ಕುರಿತು ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ. ನಾವೆಲ್ಲರೂ ಅವರ ಜೊತೆಯಾಗಿದ್ದೇವೆ ಎಂದು ಹೇಳಿದ್ದಾರೆ

ಪಠ್ಯಪುಸ್ತಕ ವಿಚಾರದಲ್ಲಿ ಕಾಂಗ್ರೆಸ್‌ ರಾಜಕಾರಣ ಮಾಡಬಾರದು. ಈ ಮೊದಲು ಸಿದ್ದರಾಮಯ್ಯನವರು ಇದ್ದಾಗ ಯಾವ ಯಾವ ಪಾಠ ಮತ್ತು ಏನೇನು ಸೇರಿಸಿದ್ದರು ಎಂಬುದು ಗೊತ್ತಿದೆ. ಬಿಜೆಪಿ ಸಮಿತಿ ರಚನೆ ಮಾಡಿದೆ. ಇತಿಹಾಸ ತಿರುಚುವ ಕೆಲಸವನ್ನು ಬಿಜೆಪಿ ಮಾಡಲ್ಲ ಎಂದು ಹೇಳಿದರು.



Join Whatsapp