ಬುಲ್ಡೋಝರ್ ಕಾರ್ಯಾಚರಣೆ ವಿರುದ್ಧ ಧ್ವನಿಯೆತ್ತಿದ ಮುಸ್ಲಿಮ್ ಪರ ಹೋರಾಟಗಾರನ ಮೇಲೆ ಪ್ರಕರಣ ದಾಖಲು

Prasthutha|

ಮಧ್ಯಪ್ರದೇಶ: ಮುಸ್ಲಿಮರ ಆಸ್ತಿಗಳನ್ನು ಗುರಿಯಾಗಿಸಿ ಸರ್ಕಾರ ನಡೆಸಿದ ಬುಲ್ಡೋಝರ್ ಕಾರ್ಯಾಚರಣೆಯ ವಿರುದ್ಧ ಧ್ವನಿಯೆತ್ತಿದ ಸಾಮಾಜಿಕ ಕಾರ್ಯಕರ್ತ ಝೈದ್ ಪಠಾಣ್ ಎಂಬಾತನ ಮೇಲೆ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬಂಧಿಸಿದ ಘಟನೆ ಮಧ್ಯಪ್ರದೇಶದ ಖಾರ್ಗೋನ್’ನಲ್ಲಿ ನಡೆದಿದೆ.

- Advertisement -

ಕೋಮು ಸಾಮರಸ್ಯ ಧಕ್ಕೆ, ಧಾರ್ಮಿಕ ಭಾವನೆಗಳ ಕೆರಳಿಸುವಿಕೆ ಮತ್ತು ಸಾಮಾಜಿಕ ಮಾಧ್ಯಮಗಳ ಆಕ್ಷೇಪಾರ್ಹ ಪೋಸ್ಟ್’ಗಳನ್ನು ಹಾಕಿದ ಆರೋಪದಲ್ಲಿ ಝೈದ್ ಪಠಾಣ್ ಅವರನ್ನು ಬಂಧಿಸಿರುವುದಾಗಿ ಇಂದೋರ್ ಜಿಲ್ಲಾಧಿಕಾರಿ ಮನೀಶ್ ಸಿಂಗ್ ಅವರು ತಿಳಿಸಿದ್ದಾರೆ.

ಈ ಮಧ್ಯೆ ಬಂಧಿತ ಪಠಾಣ್ ಅವರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಹಲವಾರು ಸಾಮಾಜಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

- Advertisement -

ಖಾರ್ಗೋನ್’ನಲ್ಲಿ ಮುಸ್ಲಿಮರಿಗೆ ಸೇರಿದ ಆಸ್ತಿಗಳನ್ನು ಅಕ್ರಮವಾಗಿ ಧ್ವಂಸಗೊಳಿಸಿರುವುದರ ವಿರುದ್ಧ ಪಠಾಣ್ ಧ್ವನಿಯೆತ್ತಿದ ಕಾರಣ ಅವರನ್ನು ಗುರಿಪಡಿಸಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ಯ ನದೀಮ್ ಖಾನ್ ಆರೋಪಿಸಿದ್ದಾರೆ.

ಕಿರುಕುಳಕ್ಕೊಳಗಾದ ಮುಸ್ಲಿಮರಿಗೆ ಝೈದ್ ಪಠಾಣ್ ಉತ್ತಮ ಬೆಂಬಲವಾಗಿದ್ದರು. ಅವರ ಬಂಧನ ಮತ್ತೊಂದು ದೌರ್ಜನ್ಯ ಎಂದು ಲೇಖಕ ಅಪೂರ್ವಾನಂದ ತಿಳಿಸಿದ್ದಾರೆ.

Join Whatsapp