ಉತ್ತರಪ್ರದೇಶ ನಂತರ ಮಧ್ಯಪ್ರದೇಶದಲ್ಲಿ ‘ಮರುನಾಮಕರಣ ತಂತ್ರ’ ಆರಂಭಿಸಿದ ಬಿಜೆಪಿ!

Prasthutha|

►ಹಬೀಬ್‌ಗಂಜ್ ರೈಲ್ವೇ ನಿಲ್ದಾಣಕ್ಕೆ ಹಿಂದೂ ರಾಣಿಯ ಹೆಸರು

- Advertisement -

ಭೋಪಾಲ್: ಮಧ್ಯಪ್ರದೇಶದ ಹಬೀಬ್‌ಗಂಜ್ ರೈಲ್ವೆ ನಿಲ್ದಾಣದ ಹೆಸರನ್ನು ಬದಲಾಯಿಸಲು ಬಿಜೆಪಿ ಮುಂದಾಗಿದೆ.
ಭೋಪಾಲ್‌ನ ಕೊನೆಯ ಹಿಂದೂ ರಾಣಿ ಕಮಲಾಪತಿ ಅವರ ಹೆಸರನ್ನು ಹಬೀಬ್ ಗಂಜ್ ರೈಲ್ವೇ ನಿಲ್ದಾಣಕ್ಕೆ ಹೆಸರಿಸುವಂತೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯ ಸಾರಿಗೆ ಇಲಾಖೆಯು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿರುವ ಪತ್ರದಲ್ಲಿ ಭೋಪಾಲ್ 16 ನೇ ಶತಮಾನದಲ್ಲಿ ‘ಗೊಂಡ’ ಅರಸರ ಆಳ್ವಿಕೆಯಲ್ಲಿತ್ತು. ಇವರ ಸ್ಮರಣೆಗಾಗಿ ಹಬೀಬ್‌ಗಂಜ್ ರೈಲ್ವೇ ನಿಲ್ದಾಣಕ್ಕೆ ರಾಣಿ ಕಮಲಾಪತಿ ಹೆಸರನ್ನಿಡಬೇಕು ಎಂದು ಆಗ್ರಹಿಸಲಾಗಿದೆ.

- Advertisement -

ಹಬೀಬ್‌ಗಂಜ್ ರೈಲ್ವೇ ನಿಲ್ದಾಣಕ್ಕೆ ಬುಡಕಟ್ಟು ರಾಣಿಯ ಹೆಸರನ್ನು ಮರುನಾಮಕರಣ ಮಾಡುವ ರಾಜ್ಯ ಸರ್ಕಾರದ ಕ್ರಮವು ಬುಡಕಟ್ಟು ಜನಾಂಗದ ಮತಗಳನ್ನು ಸೆಳೆಯುವ ತಂತ್ರವೆಂದು ಪರಿಗಣಿಸಲಾಗಿದೆ.

2013ರ ವಿಧಾನಸಭಾ ಚುನಾವಣೆಯಲ್ಲಿ 84 ಬುಡಕಟ್ಟು ಸ್ಥಾನಗಳ ಪೈಕಿ 59 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ 2018ರ ಚುನಾವಣೆಯಲ್ಲಿ 34 ಸ್ಥಾನಗಳನ್ನಷ್ಟೇ ಗೆಲ್ಲಲು ಸಾಧ್ಯವಾಗಿತ್ತು. ಮಧ್ಯಪ್ರದೇಶದ ಜನಸಂಖ್ಯೆಯ ಶೇಕಡಾ 22 ಕ್ಕಿಂತ ಹೆಚ್ಚು ಜನರು ಬುಡಕಟ್ಟು ಜನಾಂಗದವರಾಗಿದ್ದಾರೆ.

ಹಬೀಬ್‌ಗಂಜ್ ರೈಲ್ವೇ ನಿಲ್ದಾಣದ ಹೆಸರನ್ನು ರಾಣಿ ಕಮಲಾಪತಿ ಎಂದು ಬದಲಾಯಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಿರುವುದು ಸ್ವಾಗತಾರ್ಹ. ಅವರು ಕೇವಲ ಗೊಂಡ ರಾಣಿಯಾಗಿರಲಿಲ್ಲ, ಸಮಾಜದ ಎಲ್ಲಾ ವರ್ಗಗಳಿಂದ ಗೌರವಿಸಲ್ಪಟ್ಟವರಾಗಿದ್ದರು. ಪ್ರತಿಪಕ್ಷ ಕಾಂಗ್ರೆಸ್ ಇದನ್ನು ವಿರೋಧಿಸಿದರೆ, ಜನರು ಕಾಂಗ್ರೆಸ್ ಅನ್ನು ವಿರೋಧಿಸಬೇಕು ”ಎಂದು ರಾಜ್ಯ ಬಿಜೆಪಿ ಕಾರ್ಯದರ್ಶಿ ರಜನೀಶ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.

ಈ ಹಿಂದೆ ಬಿಜೆಪಿ ಆಡಳಿತವಿರುವ ಉತ್ತರಪ್ರದೇಶದಲ್ಲೂ ಸರ್ಕಾರ ರೈಲ್ವೇ ನಿಲ್ದಾಣಕ್ಕೆ ಮರುನಾಮಕರಣ ಮಾಡಿತ್ತು.

Join Whatsapp