ಪತಿಯೊಂದಿಗೆ ಜಗಳ: 18 ದಿನ ಪ್ರಾಯದ ಹಸುಗೂಸನ್ನು ನದಿಗೆ ಎಸೆದ ತಾಯಿ..!

Prasthutha|

ಸೂರತ್ : ಪತಿಯೊಂದಿಗಿನ ಜಗಳದಿಂದಾಗಿ ಮನೆ ಬಿಟ್ಟು ಬಂದ ಪತ್ನಿ ತನ್ನ ಕೈಯಲ್ಲಿದ್ದ 18 ದಿನ ಪ್ರಾಯದ ಹಸುಗೂಸನ್ನು ನದಿಗೆ ಎಸೆದ ಘಟನೆ ಗುಜರಾತ್’ನ ಸೂರತ್’ನಲ್ಲಿ ನಡೆದಿದೆ.ಸೂರತ್’ನ ಸಚಿನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪತಿ ಹಾರೂನ್ ಜೊತೆ ಜಗಳವಾಡಿದ್ದ ಪತ್ನಿ ಸಾಹಿನ್ ಶೈಕ್ (39), ಹಸುಗೂಸಿನೊಂದಿಗೆ ತನ್ನ ತವರು ಮನೆಗೆ ಬಂದಿದ್ದಳು. ಆದರೆ ಮಗಳ ಮಾತನ್ನು ನಂಬದ ಪೋಷಕರು ಗಂಡನ ಮನೆಗೆ ವಾಪಾಸ್ ತೆರಳುವಂತೆ ಸೂಚಿಸಿದ್ದರು. ಪೋಷಕರು ತನ್ನ ಬೆಂಬಲಕ್ಕೆ ನಿಲ್ಲದ ಕಾರಣ ತವರು ಮನೆಯನ್ನೂ ಬಿಟ್ಟು ಬಂದ ಸಾಹಿನ್ ಶೈಕ್, ಜೀಲಾನಿ ಸೇತುವೆಯಿಂದ ತಾಪಿ ನದಿಗೆ ತನ್ನ ಕೈಯಲ್ಲಿದ್ದ 18 ದಿನ ಪ್ರಾಯದ ಹಸುಗೂಸನ್ನು ಎಸೆದಿದ್ದಾಳೆ.

- Advertisement -

ಬಳಿಕ ನೇರವಾಗಿ ಸಚಿನ್ GIDC ಪೊಲೀಸ್ ಠಾಣೆಗೆ ತೆರಳಿ, ತನ್ನ ಮಗುವನ್ನು ಯಾರೋ ಅಪಹರಿಸಿದ್ದಾರೆ ಎಂದು ಸುಳ್ಳು ದೂರನ್ನು ನೀಡಿದ್ದರು. ಆದರೆ ಪದೇ ಪದೇ ಹೇಳಿಕೆ ಬದಲಾಯಿಸಿದ ಕಾರಣ ಸಂಶಯದಿಂದ ಪೊಲೀಸರು ಸಾಹಿನ್ ಶೈಕ್’ಳನ್ನು ಸರಿಯಾದ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಮಗುವನ್ನು ಸೇತುವೆಯಿಂದ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಕೂಡಲೇ ಅಲರ್ಟ್ ಆದ ಪೊಲೀಸರು ಅಗ್ನಿ ಶಾಮಕ ಇಲಾಖೆಯ ಸಹಾಯದೊಂದಿಗೆ ಶೋಧ ಕಾರ್ಯ ನಡೆಸಿದಾಗ ಹಸುಗೂಸಿನ ಮೃತದೇಹ ಜೀಲಾನಿ ಸೇತುವೆಯ ಕೆಳಭಾಗದಲ್ಲಿ ಪತ್ತೆಯಾಗಿದೆ.

Join Whatsapp