ಮಂಗಳೂರಿನಲ್ಲಿ ಸೆ.9ರಂದು ಮದರ್ ತೆರೇಸಾ 25ನೇ ಸಂಸ್ಕರಣಾ ದಿನಾಚರಣೆ; ವಿಚಾರ ಸಂಕಿರಣ

Prasthutha|

ಮಂಗಳೂರು: ಮಂಗಳೂರಿನ ಸಂತ ಮದರ್ ತೆರೇಸಾ ವಿಚಾರ ವೇದಿಕೆ ವತಿಯಿಂದ ಸೆಪ್ಟೆಂಬರ್ 9ರಂದು ಮಂಗಳೂರಿನ ಪುರಭವನದಲ್ಲಿ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾ ಅವರ 25ನೇ ಸಂಸ್ಕರಣಾ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷ ರೋಯ್ ಕ್ಯಾಸ್ಟಲಿನೋ ಮತ್ತು ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ತಿಳಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸೇವೆಗಾಗಿ ತನ್ನ ಜೀವಮಾನವನ್ನು ಅರ್ಪಿಸಿಕೊಂಡ ಮದರ್ ತೆರೇಸಾ ಅವರು ನೋಬೆಲ್ ಪ್ರಶಸ್ತಿ ವಿಜೇತರು. ಲೋಕ ಮಾತೆ ಎಂದೇ ಮದರ್ ತೆರೇಸಾ ಖ್ಯಾತರು. ಅವರು ಮರೆಯಾಗಿ ಕಾಲು ಶತಮಾನ ಕಳೆಯಿತು. ಅವರ ವಿಷಯವಾಗಿ ಚಿತ್ರಕಲೆ ಮತ್ತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಲ್ಲಿ ಒಟ್ಟು 600ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು. ಅವರಲ್ಲಿ 18 ಮಂದಿ ವಿಜೇತರಿಗೆ ಬಹುಮಾನ ವಿತರಣೆ ಸಹ ಸೆಪ್ಟೆಂಬರ್ 9ರಂದು ಪುರಭವನದಲ್ಲಿ ನಡೆಯಲಿದೆ ಎಂದು ರೋಯ್ ಕ್ಯಾಸ್ಟಲಿನೋ ಹೇಳಿದರು.

ಈ ಕಾರ್ಯಕ್ರಮವು ಜಿಲ್ಲೆಯ ಸೌಹಾರ್ದ ಮಾನವೀಯ ನೆಲೆಯಲ್ಲಿ ನಡೆಯುತ್ತಿದ್ದು ನಿವೃತ್ತ ಜಸ್ಟಿಸ್ ನಾಗಮೋಹನದಾಸ್ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.

- Advertisement -

ಮದರ್ ತೆರೇಸಾ ಪ್ರೀತಿ ಹಂಚಿದವರು. ಕುಷ್ಟ ರೋಗಿಗಳ ಸೇವೆ, ಅನಾಥರ ಸೇವೆ ಎಂದು ಸಾಗಿದವರು. ಸೇವೆ ಎಂದರೆ ಮದರ್ ತೆರೇಸಾ ಆದವರು ಎಂದು ಸುನಿಲ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಫಾ. ರೂಪೇಶ್ ಮಾಡ್ತಾ, ಸುಶೀಲ್ ನೊರೋನ್ಹಾ, ಸ್ಟ್ಯಾನಿ ಲೋಬೋ, ಯಶವಂತ ಮರೋಳಿ, ಎಂ. ಜಿ. ಹೆಗ್ಡೆ, ಕೆ. ಅಶ್ರಫ್, ಎಂ. ದೇವದಾಸ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp