ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ಅಮ್ಮ !

Prasthutha|

ಕೊರಟಗೆರೆ: ತನ್ನ ಮಗುವಿನ ಕಣ್ಣೆದುರೇ ತಾಯಿಯೊಬ್ಬರು ಕಲ್ಯಾಣಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ನಡೆದಿದೆ.

- Advertisement -


ಸುಶ್ಮಿತಾ (26) ಆತ್ಮಹತ್ಯೆ ಮಾಡಿಕೊಂಡ ತಾಯಿ.

ಸುಶ್ಮಿತಾಳ ಮದುವೆ ನಾಗೇಶ್ ಎಂಬುವರ ಜತೆ 6 ವರ್ಷದ ಹಿಂದೆ ಆಗಿತ್ತು. ದಂಪತಿಗೆ ಮಗು ಕೂಡ ಇದ್ದು. ನಾಗೇಶ್ ಎಲೆಕ್ಟ್ರಿಕ್ ಕೆಲಸ ಮಾಡಿಕೊಂಡಿದ್ದ. ಭಾನುವಾರ ಮಗುವನ್ನು ಕಲ್ಯಾಣಿ ಮೇಲೆ ಕೂರಿಸಿ, ಸುಶ್ಮಿತಾ ನದಿಗೆ ಜಿಗಿದಿದ್ದಾಳೆ. ಮಗು ಅಳುವುದನ್ನು ಗಮನಿಸಿದ ಗ್ರಾಮಸ್ಥರು ಸ್ಥಳಕ್ಕೆ ಬಂದಾಗ ಸುಶ್ಮಿತಾ ಆತ್ಮಹತ್ಯೆಗೆ ಯತ್ನಿಸಿರುವುದು ಗೊತ್ತಾಗಿದೆ.

- Advertisement -


ಕೂಡಲೇ ಸ್ಥಳೀಯರು ಸುಶ್ಮಿತಾಳನ್ನು ಮೇಲೆತ್ತಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.


ನಾಗೇಶ್ ಹಾಗೂ ಸುಶ್ಮಿತಾಳ ಮಧ್ಯೆ ಶನಿವಾರ ರಾತ್ರಿ ಜಗಳ ನಡೆದಿದೆ. ಇದರಿಂದ ಬೇಸತ್ತು ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.


ಈ ಬಗ್ಗೆ ಕೋಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



Join Whatsapp