ಪ್ರಿಯಕರನ ಜೊತೆ ಸೇರಿಕೊಂಡು ಮಗನನ್ನೇ ಕೊಂದ ತಾಯಿ

Prasthutha|

ಬೆಳಗಾವಿ: ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯೇ ಮಗನನ್ನು ಕೊಲೆ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದ ನಾವಿ ಗಲ್ಲಿಯ ಬೆಳಕಿಗೆ ಬಂದಿದೆ.

- Advertisement -


ಹರಿಪ್ರಸಾದ್ ಬೋಸಲೆ(22) ಮೃತ ಯುವಕ.


ಆರೋಪಿ ತಾಯಿ ಸುಧಾ ಗಂಡನನ್ನು ಬಿಟ್ಟು ಪಾತ್ರೆ ಅಂಗಡಿಯನ್ನಿಟ್ಟುಕೊಂಡು ಎರಡು ಗಂಡು ಮಕ್ಕಳ ಜತೆಗೆ ಪ್ರತ್ಯೇಕವಾಗಿ ಜೀವನ ಸಾಗಿಸುತ್ತಿದ್ದಳು. ಈ ಮಧ್ಯೆ ಪಾತ್ರೆ ಕೊಂಡುಕೊಳ್ಳಲು ಬಂದ ಕುಮಾರ್ ಬಬಲೇಶ್ವರ್ ಮೇಲೆ ಸುಧಾಗೆ ಪ್ರೀತಿಯಾಗಿದೆ. ಈ ವಿಚಾರ ಮಗ ಹರಿಪ್ರಸಾದ್ ಗೆ ಗೊತ್ತಾಗುತ್ತಿದ್ದಂತೆ ಆಕ್ರೋಶಗೊಂಡ ಮಗ ತಾಯಿ ಜತೆಗೆ ಜಗಳ ಮಾಡಿಕೊಂಡು ಸಂಬಂಧಿಕರಿಗೆ ಕರೆ ಮಾಡಿ ತಾಯಿಯ ವಿಚಾರ ಹೇಳಿದ್ದ. ಆಗ ಕುಟುಂಬಸ್ಥರು ಕರೆ ಮಾಡಿ ಸುಧಾಗೆ ಬೈಯ್ದಿದ್ದರು. ಇದರಿಂದ ತನ್ನ ಅನೈತಿಕ ಸಂಬಂಧದ ವಿಚಾರ ಗೊತ್ತಾಯಿತು, ಹೀಗೆ ಬಿಟ್ಟರೇ, ಇನ್ನೂಳಿದವರಿಗೂ ವಿಚಾರ ಗೊತ್ತಾಗಿ, ತನ್ನ ಮಾನ ಮರ್ಯಾದೆ ಹೋಗುತ್ತದೆ ಎಂದುಕೊಂಡ ಆರೋಪಿ ತಾಯಿ ಮಗನನ್ನೇ ಮುಗಿಸಲು ಸ್ಕೇಚ್ ಹಾಕಿದ್ದಳು. ಪ್ರಿಯಕರ ಕುಮಾರ್ ಜತೆಗೆ ಸೇರಿಕೊಂಡು ಮೇ.28ರಂದು ರಾತ್ರಿ ಹರಿಪ್ರಸಾದ್ ಮಲಗಿದ ಮೇಲೆ ಸುಧಾ, ಚಿಕ್ಕ ಮಗ, ಆಕೆಯ ಸಹೋದರಿ ವೈಶಾಲಿ ಮಾನೆ, ಸಹೋದರಿ ಮಗ ಗೌತಮ್ ಮಾನೆ, ಪ್ರಿಯಕರ ಕುಮಾರ್ ಬಬಲೇಶ್ವರ ಸೇರಿ ಎಂಟು ಜನ ಕೊಲೆ ಮಾಡಿದ್ದಾರೆ. ಹರಿಪ್ರಸಾದ್ನನ್ನ ಉಸಿರುಗಟ್ಟಿಸಿ, ಕತ್ತು ಹಿಸುಕಿ ಕೊಲೆ ಮಾಡಿ ನಂತರ ಎಲ್ಲರೂ ರಾತ್ರೋರಾತ್ರಿ ಎಸ್ಕೇಪ್ ಆಗಿದ್ದರು.

- Advertisement -


ಈ ಕುರಿತು ಅನುಮಾನ ಯುವಕನ ತಂದೆಗೆ ಬಂದಿದ್ದು, ತನ್ನ ಮಗನ ಸಾವು ಸಹಜ ಸಾವು ಅಲ್ಲವೆಂದು ರಾಯಬಾಗ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇತ್ತ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಇದು ಸಜಹ ಸಾವಲ್ಲ, ಕೊಲೆ ಎಂದು ರಿಪೋರ್ಟ್ ಬಂದಿತ್ತು. ಕೂಡಲೇ ಅಲರ್ಟ್ ಆದ ಪೊಲೀಸರು ತನಿಖೆಗಿಳಿದು ವಿಚಾರಣೆ ನಡೆಸಿದಾಗ, ಒಂಬತ್ತು ತಿಂಗಳು ಹೆತ್ತು ಹೊತ್ತು ಸಾಕಿದ ತಾಯಿಯೇ ಮಗನನ್ನ ಕೊಲೆ ಮಾಡಿಸಿದ ಘಟನೆ ಬೆಳಕಿಗೆ ಬಂದಿದೆ.