ಸೊಸೆಯ ಸಾವಿನ ಸುದ್ದಿ ತಿಳಿದ ಅತ್ತೆಗೆ ಹೃದಯಾಘಾತ, ನಿಧನ!

Prasthutha|

ಸೊಸೆ ಸಾವಿಗೀಡಾದ ವಾಸ್ತವ ಅರಗಿಸಿಕೊಳ್ಳಲಾಗದ ಅತ್ತೆಗೆ ಹೃದಯಾಘಾತ ಆಗಿದ್ದು, ಸಾವನ್ನಪ್ಪಿದ್ದಾರೆ. ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕಾಡು ಅಂಕಣ ಹಳ್ಳಿಯಲ್ಲಿ ನಡೆದಿದೆ.

- Advertisement -

ಅನಾರೋಗ್ಯದಿಂದ ಸೊಸೆ ಸುಶೀಲ (42) ಸಾವನ್ನಪ್ಪಿದ್ದು ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಅತ್ತೆ ಹುಚ್ಚಮ್ಮ ಕೂಡ (75) ಸಾವನ್ನಪ್ಪಿದ್ದಾರೆ.

ಹುಚ್ಚಮ್ಮ ಮತ್ತು ಸುಶೀಲ ತಾಯಿ ಮಗಳಂತೆ ಬದುಕಿದ್ದರು ಎಂದು ಗ್ರಾಮಸ್ಥರು ಮಾತ ನಾಡಿಕೊಳ್ಳುತ್ತಿರೋದು ಕಂಡುಬಂದಿದೆ.

- Advertisement -

ಅನಾರೋಗ್ಯದಿಂದ ಸುಶೀಲ ಸಾವನ್ನಪ್ಪಿದ್ದಾರೆ. ಈ ಸಂದರ್ಭದಲ್ಲಿ ಸೊಸೆ ಸಾವಿನ ಸುದ್ದಿಯನ್ನು ಕೇಳಿ ಅತ್ತೆ ಹುಚ್ಚಮ್ಮ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದು ಅತ್ತೆ ಸೊಸೆ ಸಾವಿನಿಂದ ಇಡೀ ಗ್ರಾಮದಲ್ಲಿ ಮೌನ ಆವರಿಸಿದೆ.



Join Whatsapp