ಚಿಕಿತ್ಸೆಗೆ ತೆರಳಿದ ತಾಯಿ, ಮಗಳು ಆಸ್ಪತ್ರೆಯಲ್ಲಿ ಶವವಾಗಿ ಪತ್ತೆ

Prasthutha|

ಗಾಂಧಿನಗರ: ಆಪರೇಷನ್ ಥಿಯೇಟರ್‌ನ ಕಪಾಟಿನಲ್ಲಿ ಮಗಳ ಹಾಗೂ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾದ ಘಟನೆ ಅಹಮದಾಬಾದ್ ನ ಭುಲಾಭಾಯಿ ಪಾರ್ಕ್ ಬಳಿ ಇರುವ ಆಸ್ಪತ್ರೆಯಲ್ಲಿ ನಡೆದಿದೆ.

- Advertisement -

ಮೃತರನ್ನು ಚಂಪಾ ಮತ್ತು ಭಾರತಿ ವಾಲಾ (30) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ಆಪರೇಷನ್ ಥಿಯೇಟರ್‌ನಲ್ಲಿ ದುರ್ವಾಸನೆ ಬರುತ್ತಿದ್ದ ಕಾರಣ ಸಿಬ್ಬಂದಿಯೊಬ್ಬರು ಅಲ್ಲಿದ್ದ ಕಪಾಟನ್ನು ತೆರೆದಾಗ ಭಾರತಿಯ ಮೃತದೇಹ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದಾಗ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿ ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ್ದಾರೆ.

ಸಿಸಿಟಿವಿಯಲ್ಲಿ ಭಾರತಿ ಮತ್ತೊಬ್ಬ ಮಹಿಳೆಯೊಂದಿಗೆ ಇರುವುದು ಸೆರೆಯಾಗಿದೆ. ಈ ಹಿನ್ನೆಲೆಯಲ್ಲಿ ಹುಡುಕಿದಾಗ ಕೊಠಡಿಯೊಂದರಲ್ಲಿ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದ್ದು, ಬಳಿಕ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.

- Advertisement -

ಈ ವೇಳೆ ತಾಯಿ, ಮಗಳಿಬ್ಬರೂ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಿದ್ದರು. ತಾಯಿ ಮತ್ತು ಮಗಳಿಗೆ ಮೊದಲು ಇಂಜೆಕ್ಷನ್ ನೀಡಿ ಕೊಂದಿದ್ದು, ಅದಾದ ಬಳಿಕ ಖಚಿತ ಪಡಿಸಿಕೊಳ್ಳಲು ಕತ್ತು ಹಿಸುಕಿದ್ದಾರೆ ಎಂದು ಎಸಿಪಿ ಮಿಲಾಪ್ ಪಟೇಲ್ ಶಂಕೆ ವ್ಯಕ್ತಪಡಿಸಿದ್ದಾರೆ.

 ಕೊಲೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಸಂಬಂಧ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ಭಾರತಿಯ ಸಂಬಂಧಿ ಮನ್ಸುಖ್ ಎಂಬಾತನನ್ನು ಬಂಧಿಸಲಾಗಿದೆ.

Join Whatsapp