ದಕ್ಷಿಣ ಕನ್ನಡ ಜಿಲ್ಲೆಯಿಂದ ಪೊಲೀಸ್ ಕಾನ್ಸ್ ಸ್ಟೆಬಲ್ ಹುದ್ದೆಗೆ ಅತ್ಯಂತ ನಿರುತ್ಸಾಹ ಪ್ರತಿಕ್ರಿಯೆ: ಆರಗ ಜ್ಞಾನೇಂದ್ರ

Prasthutha|

ಬೆಳಗಾವಿ: ರಾಜ್ಯದಲ್ಲಿ ಹೊಸದಾಗಿ ಸುಮಾರು 4000 ಕಾನ್ಸ್ ಸ್ಟೆಬಲ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಸುಮಾರು ಮೂರುವರೆ ಲಕ್ಷದಷ್ಟು ಅರ್ಜಿಗಳು, ರಾಜ್ಯದೆಲ್ಲೆಡೆಯಿಂದ ಬಂದಿವೆ, ಆದರೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಅತ್ಯಂತ ಕಡಿಮೆ ಸಂಖ್ಯೆ ಯಲ್ಲಿ ಅರ್ಜಿಗಳು ಸ್ವೀಕೃತವಾಗಿವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧಾನ ಸಭೆಗೆ ತಿಳಿಸಿದ್ದಾರೆ.

- Advertisement -

ವಿಧಾನಸಭೆಯಲ್ಲಿ ಇಂದು ಪ್ರಶ್ನೋತ್ತರ ವೇಳೆಯಲ್ಲಿ, ಬಿಜೆಪಿ ಸದಸ್ಯ, ಸಂಜೀವ ಮಠದೂರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 4000 ಕಾನ್ಸ್ ಸ್ಟೆಬಲ್ ಹುದ್ದೆಗಳಿಗೆ ಒಟ್ಟಾರೆಯಾಗಿ 3.5 ಲಕ್ಷಕ್ಕೂ ಅಧಿಕ ಅರ್ಜಿಗಳು ಬಂದಿವೆ ಮತ್ತು ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ.

“ಆದರೆ ಕಾನ್ಸ್ ಸ್ಟೆಬಲ್ ಹುದ್ದೆಗಳಿಗೆ ಸ್ವೀಕರಿಸಿದ ಅರ್ಜಿಗಳು ಕೆಲವೇ ಕೆಲವು ನೂರರಷ್ಟಿದ್ದು, ಸ್ಥಳೀಯ ಯುವಕರನ್ನು ಪೊಲೀಸ್ ಇಲಾಖೆಗೆ ಸೇರಲು ಪ್ರೋತಾಹಿಸಲಾಗುತ್ತಿದೆ ಎಂದರು

- Advertisement -

“ರಾಜ್ಯದ ಬೇರೆ ಭಾಗಗಳಿಗೆ ಹೋಲಿಸಿದರೆ, ಕಾನ್ಸ್ ಸ್ಟೆಬಲ್ ಹುದ್ದೆಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಬಂದ ಅರ್ಜಿಗಳು ಬಹಳ ಕಡಿಮೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕನ್ನಡ ಭಾಷೆಯಲ್ಲದೆ, ಉಪ ಭಾಷೆಗಳಾದ ತುಳು ಮತ್ತು ಇತರ ಭಾಷೆಗಳೂ ಹೆಚ್ಚು ಬಳಕೆಯಲ್ಲಿದ್ದು, ಕರ್ತವ್ಯ ನಿರ್ವಹಿಸುವ ಪೊಲೀಸರಿಗೆ, ಸ್ಥಳೀಯ ಆಡು ಭಾಷೆಯ ಜ್ಞಾನ ಅತ್ಯಗತ್ಯವಿದೆ  ಎಂದರು.

ನೇಮಕಾತಿ ಪ್ರಕ್ರಿಯೆಯನ್ನು ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ, ರಿಕ್ತ ವಾಗುವ ಪೊಲೀಸ್ ಸಬ್ ಇನ್ಸ್ಪೆಕ ಹುದ್ದೆಗಳಿಗೆ, ವಲಯವಾರು  ಮತ್ತು ಪೊಲೀಸ್ ಆಯುಕ್ತಾಲಯವಾರು ಮತ್ತು ಪೊಲೀಸ್ ಕಾನ್ಸ್ಟೇಬಲ್ ಸಿವಿಲ್ ಮತ್ತು ಸಶಸ್ತ್ರ ಹುದ್ದೆಗಳಿಗೆ ಜಿಲ್ಲಾವಾರು ಅಧಿಸೂಚನೆಗಳನ್ನು ಹೊರಡಿಸಿ, ರಾಜ್ಯ ವ್ಯಾಪ್ತಿಯಿಂದ ಅರ್ಜಿಗಳನ್ನು ಆಹ್ವಾನಿಸಿ ಲಿಖಿತ/ಸಹಿಷ್ಣುತೆ ಮತ್ತು ದೇಹದಾರ್ಢ್ಯತೆ ಮತ್ತು ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದ ನಂತರ ಅಂತಿಮವಾಗಿ ನೇಮಕಾತಿ ಆದೇಶಗಳನ್ನು ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದೂ ಸದನಕ್ಕೆ ತಿಳಿಸಿದರು.



Join Whatsapp