ಮಸೀದಿಯಲ್ಲಿ ಧ್ವನಿವರ್ಧಕ ಬಳಕೆಗೆ ಅನುಮತಿ ಪಡೆಯಲಿ: ಜಮೀಯತ್ ಉಲೆಮಾ ಇ ಹಿಂದ್ ಕರೆ

Prasthutha|

ಮುಂಬೈ: ಮಸೀದಿಗಳ ಬಳಿ ಧ್ವನಿವರ್ಧಕ ಬಳಸುವ ಕುರಿತು ಗದ್ದಲದ ನಡುವೆ, ಧ್ವನಿವರ್ಧಕ ಬಳಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆಯುವಂತೆ ಜಮೀಯತ್ ಉಲೆಮಾ ಇ ಹಿಂದ್ ಮಹಾರಾಷ್ಟ್ರ ಘಟಕ ಎಲ್ಲಾ ಮಸೀದಿಗಳಿಗೆ ಮನವಿ ಮಾಡಿದೆ.

- Advertisement -

ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ಆದೇಶಗಳನ್ನು ಜಾರಿಗೆ ತರಲು ಮಹಾರಾಷ್ಟ್ರ ಗೃಹ ಇಲಾಖೆ ನಿರ್ಧರಿಸಿದೆ. ಮಾತ್ರವಲ್ಲ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.

ಈ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಜಮೀಯತ್ ಉಲೆಮಾ ಇ ಹಿಂದ್ ಮಹಾರಾಷ್ಟ್ರ ಘಟಕ ಕಾರ್ಯದರ್ಶಿ, ಗುಲ್ಝಾರ್ ಅಝ್ಮಿ, ರಾಜ್ಯದ ಹೆಚ್ಚಿನ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸಲು ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದೆ. ಅನುಮತಿ ಪಡೆಯದವರು ಇನ್ನು ಮುಂದಕ್ಕೆ ಮಸೀದಿಗಳಲ್ಲಿ ಆಝಾನ್ ಗಾಗಿ ಧ್ವನಿವರ್ಧಕ ಬಳಸಲು ಅನುಮತಿ ಪಡೆಯುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಮುಸ್ಲಿಮ್ ಸಮುದಾಯದೊಂದಿಗೆ ಉತ್ತಮ ರೀತಿಯಲ್ಲಿ ಸಹಕರಿಸುತ್ತಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ಸದ್ಯ ಧ್ವನಿವರ್ಧಕ ಸಮಸ್ಯೆಗಳನ್ನು ನಿಭಾಯಿಸಲು ಮಹಾರಾಷ್ಟ್ರ ಸರ್ಕಾರ ಎಲ್ಲರಿಗೂ ನ್ಯಾಯ ಒದಗಿಸಲು ಕಾರ್ಯ ನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದ್ದಾರೆ.



Join Whatsapp