ಸರ್ವ ಧರ್ಮೀಯರಿಗೂ ಮಸೀದಿ ದರ್ಶನ ಕಾರ್ಯಕ್ರಮ

Prasthutha|

ಬೆಂಗಳೂರು: ಸಾರ್ವಜನಿಕರಲ್ಲಿ ಸೌಹಾರ್ದತೆ, ಸಾಮರಸ್ಯ, ಸಹಬಾಳ್ವೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಪರಸ್ಪರ ಅಪನಂಬಿಕೆ, ಪೂರ್ವಾಗ್ರಹಗಳನ್ನು ದೂರ ಮಾಡಲು ನವಂಬರ್ 5 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯಲ್ಲಿರುವ ಮಸ್ಜಿದೆ ಖಾದರಿಯ್ಯದಲ್ಲಿ ‘ಮಸೀದಿ ದರ್ಶನ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಎಲ್ಲಾ ದರ್ಮೀಯ ಸ್ತ್ರೀ – ಪುರುಷರು ಸಂಜೆ 4 ರಿಂದ 8 ರವರೆಗೆ ಮಸೀದಿಯಲ್ಲಿ ನಡೆಯುವ ಪ್ರಾರ್ಥನೆ – ಉಪಾಸನೆಗಳನ್ನು ನೇರವಾಗಿ ವೀಕ್ಷಿಸಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಜನರ ನಡುವೆ ಅಪನಂಬಿಕೆ, ಸಂದೇಹಗಳನ್ನು ದೂರ ಮಾಡುವುದು ಕಾಲದ ಅನಿವಾರ್ಯ ಬೇಡಿಕೆಯಾಗಿದೆ. ಪರಸ್ಪರ ಅರಿವು ನಮ್ಮಲ್ಲಿ ಸೌಹಾರ್ದವನ್ನು ಗಟ್ಟಿಗೊಳಿಸುತ್ತದೆ. ನಿಗೂಢಗಳು ನಮ್ಮನ್ನು ಒಡೆಯುವ ಪಿತೂರಿ ಮಾಡುತ್ತದೆ. ಇಂತಹ ಕಾರ್ಯಕ್ರಮಗಳ ಮೂಲಕ ಸಂದೇಹಗಳ ಗೋಡೆಗಳನ್ನು ಕೆಡಹಿ ಹೃದಯಗಳನ್ನು ಬೆಸೆಯುವ ಪ್ರಯತ್ನ ನಮ್ಮದು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಎಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗುತ್ತದೆ.

- Advertisement -

ಪತ್ರಿಕಾಗೋಷ್ಠಿಯಲ್ಲಿ ಜುಮಾ ಮಸೀದಿ ಟ್ರಸ್ಟ್ ಬೋರ್ಡ್ ಆಡಳಿತ ಸಮಿತಿಯ ಕಾರ್ಯದರ್ಶಿ ಹಾಗೂ ಸಮಾಜ ಸೇವಕರಾದ ಉಸ್ಮಾನ್ ಶರೀಫ್, ಮುಹಮ್ಮದ್ ನವಾಝ್, ಫಿರೋಝ್ ಖಾನ್, ಅಫ್ಸರ್ ಅಹ್ಮದ್, ನವೀದ್ ಇರ್ಫಾನ್, ತೌಸೀಫ್ ಅಹ್ಮದ್ ಹಾಜರಿದ್ದರು.

Join Whatsapp