ಮುಂಬೈ: ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಉದ್ರಿಕ್ತ ಜನರ ಗುಂಪು, ಮಸೀದಿ ಮೇಲೆ ಆಕ್ರಮಣ ಮಾಡಿ ಧ್ವಂಸಗೊಳಿಸಿದೆ ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ.
ಈ ಕುರಿತು ಓವೈಸಿ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ. ‘ಸಿಎಂ ಶಿಂದೆ ಹಾಗೂ ಡಿಸಿಎಂ ಫಡಣವೀಸ್ ಸರ್ಕಾರದ ಅಡಿಯಲ್ಲಿ ಡಿಸೆಂಬರ್ 6ರ ಘಟನೆ ಮರುಕಳಿಸುತ್ತಿದೆ. ಮಸೀದಿಯ ಮೇಲೆ ದಾಳಿ ನಡೆದಿದೆ. ಇದು ಕಾನೂನಿನ ಮೇಲಿನ ದಾಳಿಯಾಗಿದ್ದು, ಸರ್ಕಾರವು ಕಾಳಜಿ ವಹಿಸುತ್ತಿಲ್ಲ’ ಎಂದು ಅವರು ದೂರಿದ್ದಾರೆ. ‘ಇಂತಹ ದಾಳಿಯನ್ನು ತಡೆಯಲು ಮುಂಬರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಂಐಎಂ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಮುಸ್ಲಿಮರು ತಕ್ಕ ಉತ್ತರ ನೀಡಬೇಕು’ ಎಂದು ಓವೈಸಿ ಕರೆ ನೀಡಿದ್ದಾರೆ.
‘ಇಂತವರಿಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳು ಹಾಗೂ ನಾಯಕರ ಮೌನವನ್ನು ನೆನಪಿನಲ್ಲಿಟ್ಟುಕೊಳ್ಳಬೇಕು’ ಎಂದು ಹೇಳಿದ್ದಾರೆ.
"6 December continues "@mieknathshinde @Dev_Fadnavis under your government a Masjid is attacked by a Mob,this is an attack on Rule of Law but your government is not concerned.
— Asaduddin Owaisi (@asadowaisi) July 15, 2024
Muslims of Maharashtra must reply through Ballot by ensuring your party MIM candidates win the… https://t.co/085RnK2y7u