ಮೊರೊಕ್ಕೊದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 632ಕ್ಕೆ ಏರಿಕೆ

Prasthutha|

ರಬಾತ್: ಶುಕ್ರವಾರ ರಾತ್ರಿ ಮೊರೊಕ್ಕೊದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, 632ಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

- Advertisement -


329 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8 ದಾಖಲಾಗಿದ್ದು, ಸಾವು-ನೋವಿನ ಸಂಖ್ಯೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆಯಿದೆ. ಸ್ಥಳೀಯ ಕಾಲಮಾನದ ಪ್ರಕಾರ ಶುಕ್ರವಾರ ರಾತ್ರಿ 11 ಗಂಟೆ ನಂತರ ಮರಕೇಶನ್ ನ ನೈಋತ್ಯಕ್ಕೆ 72 ಕಿಮೀ. ಹಾಗೂ ಅಟ್ಲಾಸ್ ಪರ್ವತದ ಪಟ್ಟಣವಾದ ಒಕೈಮೆಡ್ನಿಂದ 56 ಕಿಮೀ. ಪಶ್ಚಿಮಕ್ಕೆ ತೀವ್ರ ಸ್ವರೂಪದ ಭೂಕಂಪ ಸಂಭವಿಸಿದೆ.

Join Whatsapp