ಲೋಕಸಭೆಯಲ್ಲಿ ಬಾಕಿ ಉಳಿದ 700 ಕ್ಕೂ ಹೆಚ್ಚು ಖಾಸಗಿ ಮಸೂದೆಗಳು

Prasthutha|

ನವದೆಹಲಿ: ಲೋಕಸಾಭೆಯಲ್ಲಿ 700ಕ್ಕೂ ಹೆಚ್ಚು ಖಾಸಗಿ ಮಸೂದೆಗಳು ಬಾಕಿ ಉಳಿದಿವೆ. ಹಲವು ವಿಧೇಯಕಗಳು ಜೂನ್ 2019ರಲ್ಲಿ ಮಂಡಿಸಲಾಗಿದ್ದರೆ, ಕೆಲವು ಈ ವರ್ಷದ ಆಗಸ್ಟ್‌ನ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಈ ಮಸೂದೆಗಳು ಏಕರೂಪ ನಾಗರಿಕ ಸಂಹಿತೆ, ಲಿಂಗ ಸಮಾನತೆ, ಹವಾಮಾನ ಬದಲಾವಣೆ, ಕೃಷಿ, ಅಸ್ತಿತ್ವದಲ್ಲಿರುವ ಕ್ರಿಮಿನಲ್ ಮತ್ತು ಚುನಾವಣಾ ಕಾನೂನುಗಳಿಗೆ ತಿದ್ದುಪಡಿ ಮಾಡುವಂತಹ ವಿಷಯಗಳನ್ನು ಒಳಗೊಂಡಿವೆ.

- Advertisement -

ಖಾಸಗಿ ಮಸೂದೆಗಳು ಸಂಸದರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಮಂಡಿಸುವ ಮಸೂದೆಗಳಾಗಿವೆ. ಖಾಸಗಿ ಮಸೂದೆಯನ್ನು ಮಂಡಿಸುವ ಉದ್ದೇಶ ಹೊಸ ಕಾನೂನುಗಳನ್ನು ಪರಿಚಯಿಸುವುದು ಅಥವಾ ಅಸ್ತಿತ್ವದಲ್ಲಿರುವ ಕಾನೂನುಗಳಲ್ಲಿ ಅಗತ್ಯವಿರುವ ಬದಲಾವಣೆಗಳನ್ನು ಎತ್ತಿ ತೋರಿಸುವುದಾಗಿದೆ. ಅಂತಹ 713 ಖಾಸಗಿ ಮಸೂದೆಗಳು ಕೆಳಮನೆಯಲ್ಲಿ ಬಾಕಿ ಉಳಿದಿವೆ.