ಶೇಕಡಾ 66 ರಷ್ಟು ಶಾಲೆಗಳು ಇಂಟರ್ನೆಟ್ ಸೌಲಭ್ಯ ಹೊಂದಿಲ್ಲ: ಕೇಂದ್ರ ಸರ್ಕಾರ

Prasthutha|

ನವದೆಹಲಿ: 2021–22ನೇ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಸಾಂಕ್ರಾಮಿಕದಿಂದಾಗಿ ಆನ್’ಲೈನ್ ಮೂಲಕ ಶಾಲೆ ನಡೆಯುತ್ತಿದ್ದಾಗ ದೇಶದ 14,89,115 ಶಾಲೆಗಳ ಪೈಕಿ ಶೇಕಡಾ 66 ರಷ್ಟು ಶಾಲೆಗಳು ಇಂಟರ್ನೆಟ್ ಸೌಲಭ್ಯವನ್ನು ಹೊಂದಿರಲಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವಾಲಯ ಬಿಡುಗಡೆಗೊಳಿಸಿದ ವರದಿಯಲ್ಲಿ ಬಹಿರಂಗವಾಗಿದೆ.

- Advertisement -

ಭಾರತದಲ್ಲಿ ಶೇಕಡಾ 55.5 ರಷ್ಟು ಶಾಲೆಗಳು ಕಂಪ್ಯೂಟರ್ ಸೌಲಭ್ಯಗಳನ್ನು ಹೊಂದಿಲ್ಲ ಎಂದು ಅದು ತಿಳಿಸಿದೆ.

2021-22ನೇ ಶೈಕ್ಷಣಿಕ ವರ್ಷದಲ್ಲಿ ಕೇವಲ 6,82,566 ಶಾಲೆಗಳು ಕಂಪ್ಯೂಟರ್‌ಗಳನ್ನು ಹೊಂದಿದ್ದರೆ, ಅವುಗಳಲ್ಲಿ 5,04,989 ಇಂಟರ್ನೆಟ್ ಸಂಪರ್ಕವನ್ನು ಹೊಂದಿವೆ ಎಂದು ಗುರುವಾರ ಬಿಡುಗಡೆಯಾದ ಏಕೀಕೃತ ಜಿಲ್ಲಾ ಶಿಕ್ಷಣ ವ್ಯವಸ್ಥೆ (ಯುಐಡಿಎಸ್‌ಇ) ವರದಿ ಬಹಿರಂಗಪಡಿಸಿದೆ.

- Advertisement -

ಕೇವಲ ಶೇಕಡಾ 2.2 ರಷ್ಟು ಶಾಲೆಗಳು ಡಿಜಿಟಲ್ ಲೈಬ್ರರಿಗಳನ್ನು ಹೊಂದಿದ್ದು, ಅವುಗಳಲ್ಲಿ ಶೇಕಡಾ 14.9 ರಷ್ಟು ಮಾತ್ರ ಸ್ಮಾರ್ಟ್ ತರಗತಿಗಳನ್ನು ಹೊಂದಿವೆ. ಡಿಜಿಟಲ್ ಬೋರ್ಡ್‌ಗಳು, ಸ್ಮಾರ್ಟ್ ಬೋರ್ಡ್‌ಗಳು ಮತ್ತು ಸ್ಮಾರ್ಟ್ ಟಿವಿಗಳೊಂದಿಗೆ ಬೋಧನೆಗಾಗಿ ಬಳಸಲಾಗುತ್ತದೆ ಎಂದು ಅದು ತನ್ನ ವರದಿಯಲ್ಲಿ ತಿಳಿಸಿದೆ.

ಶೇಕಡಾ 10.6 ರಷ್ಟು ಶಾಲೆಗಳು ವಿದ್ಯುತ್ ಹೊಂದಿಲ್ಲ ಮತ್ತು ಶೇಕಡಾ 23.04 ರಷ್ಟು ಆಟದ ಮೈದಾನಗಳಿಲ್ಲ ಎಂದು ಶಿಕ್ಷಣ ಸಚಿವಾಲಯ ಗಮನಿಸಿದೆ.

ಶೇಕಡಾ 12.7 ರಷ್ಟು ಗ್ರಂಥಾಲಯಗಳು ಮತ್ತು ವಾಚನಾಲಯಗಳನ್ನು ಹೊಂದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.



Join Whatsapp