ಅಕ್ಟೋಬರ್‌ನಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು X ಖಾತೆ ನಿಷೇಧ!

Prasthutha|

ನವದೆಹಲಿ: ಈ ಹಿಂದೆ ಟ್ವಿಟರ್ ಎಂದು ಗುರುತಿಸಿಕೊಂಡಿದ್ದ, ಈಗಿನ
ಎಕ್ಸ್ 30 ದಿನಗಳಲ್ಲಿ ಭಾರತದಲ್ಲಿ ದಾಖಲೆಯ 2,34,584 ಖಾತೆಗಳನ್ನ ನಿಷೇಧಿಸಿದೆ. ಸೆಪ್ಟೆಂಬರ್ 26 ಮತ್ತು ಅಕ್ಟೋಬರ್ 25ರ ನಡುವಿನ ಸಮಯದಲ್ಲಿ ಈ‌ ನಿಷೇಧ ನಡೆದಿದೆ.

- Advertisement -

ಇತ್ತೀಚೆಗೆ ಹೊಸ ಎಕ್ಸ್ ಸಿಇಒ ಲಿಂಡಾ ಯಾಕರಿನೊ ಅವರನ್ನು ನೇಮಿಸಿದ ಮಸ್ಕ್ ಅವರ ಅಡಿಯಲ್ಲಿ ಮೈಕ್ರೋ-ಬ್ಲಾಗಿಂಗ್ ಪ್ಲಾಟ್ಫಾರ್ಮ್, ದೇಶದಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸಿದ್ದಕ್ಕಾಗಿ 2,755 ಖಾತೆಗಳನ್ನು ತೆಗೆದುಹಾಕಿದೆ.