ಬಾಂಬ್ ಶೆಲ್ಟರ್ ನಲ್ಲಿ ರಕ್ಷಣೆ ಪಡೆಯುವಂತೆ ನಾಗರೀಕರಿಗೆ ಇಸ್ರೇಲ್ ಸೂಚನೆ
ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್ ದಾಳಿ ನಡೆಸಿದೆ ಎಂದು ಇಸ್ರೇಲಿ ಮಿಲಿಟರಿ ಮಂಗಳವಾರ ದೃಢಪಡಿಸಿದೆ.
ಲೆಬನಾನ್ ನ ಹಿಜ್ಬುಲ್ಲಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ನಡೆಸಿ, ಹಿಜ್ಬುಲ್ಲಾ ಕಮಾಂಡರ್ ಗಳನ್ನು ಹತ್ಯೆಗೈದ ಮೇಲೆ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾವು ಹೆಚ್ಚಿದೆ.
ಇಸ್ರೇಲಿ ವಿದೇಶಾಂಗ ಸಚಿವಾಲಯವು ಇಸ್ರೇಲ್ ರಕ್ಷಣಾ ಪಡೆಗಳನ್ನು (IDF) ಉಲ್ಲೇಖಿಸಿದೆ ಮತ್ತು 10.08 pm IST ಯಲ್ಲಿ ಕ್ಷಿಪಣಿಗಳನ್ನು “ಸ್ವಲ್ಪ ಸಮಯದ ಹಿಂದೆ” ಹಾರಿಸಲಾಗಿದೆ ಎಂದು ಹೇಳಿದೆ.
“ಸ್ವಲ್ಪ ಸಮಯದ ಹಿಂದೆ, ಇರಾನ್‌ನಿಂದ ಇಸ್ರೇಲ್ ಕಡೆಗೆ ಕ್ಷಿಪಣಿಗಳನ್ನು ಉಡಾಯಿಸಲಾಯಿತು. ಇಸ್ರೇಲಿಗರು ಜಾಗರೂಕರಾಗಿರಲು ಮತ್ತು ಹೋಮ್ ಫ್ರಂಟ್ ಕಮಾಂಡ್‌ನ ಸೂಚನೆಗಳನ್ನು ನಿಖರವಾಗಿ ಅನುಸರಿಸಲು ಸೂಚಿಸಲಾಗಿದೆ” ಎಂದು ವಿದೇಶಾಂಗ ಸಚಿವಾಲಯದ ಹ್ಯಾಂಡಲ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದೆ.