ಹಸೀನಾ ದೇಶ ಬಿಟ್ಟ ಮೇಲೆ ಹಿಂಸಾಚಾರ: 100ಕ್ಕೂ ಹೆಚ್ಚು ಜನ ಸಾವು

Prasthutha|

ಢಾಕಾ: ಬಾಂಗ್ಲಾದೇಶದ ಪ್ರಧಾನಿ ಹುದ್ದೆಗೆ ಹಸೀನಾ ರಾಜೀನಾಮೆ ನೀಡಿ ಪಲಾಯನ ಮಾಡಿದ್ದಾರೆ. ಹಸೀನಾ ದೇಶ ಬಿಟ್ಟ ಬಳಿಕವೂ ಕೆಲಕಾಲ ಹಿಂಸಾಚಾರ ಮುಂದುವರಿದಿದ್ದು, 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

- Advertisement -


ಹಸೀನಾ ದೇಶ ತೊರೆಯುತ್ತಿದ್ದಂತೆ ಅವರ ನಿವಾಸ ಪ್ರವೇಶಿಸಿದ ಪ್ರತಿಭಟನಕಾರರು ಮನೆಯೊಳಗಿನ ವಸ್ತುಗಳನ್ನು ಕೊಳ್ಳೆಹೊಡೆದಿದ್ದಾರೆ, ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಅವಾಮಿ ಲೀಗ್ ಪಕ್ಷದ ನಾಯಕರ ನಿವಾಸ, ಕಚೇರಿಗೂ ನುಗ್ಗಿ ದಾಂಧಲೆ ನಡೆಸಿದ್ದಾರೆ.


ರಾಜಧಾನಿ ಢಾಕಾ ಮತ್ತು ಇತರ ಹಲವಾರು ಸ್ಥಳಗಳಲ್ಲಿ ನಡೆಸಿದ ಲೂಟಿ, ಗಲಾಟೆ ವೇಳೆ 119 ಜನರು ಮೃತಪಟ್ಟಿದ್ದಾರೆ.



Join Whatsapp