ಹೊಸಪೇಟೆ: ಖಬರಸ್ತಾನದ ನೂರಕ್ಕೂ ಹೆಚ್ಚು ಸಮಾಧಿಗಳನ್ನು ದುಷ್ಕರ್ಮಿಗಳು ಸಂಪೂರ್ಣ ನೆಲಸಮಗೊಳಿಸಿರುವ ಘಟನೆ ತಾಲೂಕಿನ ಕೊಂಡನಾಯಕನಹಳ್ಳಿ ಬಳಿ ನಡೆದಿದೆ.
ಸುಮಾರು ವರ್ಷಗಳಿಂದ ಮುಸ್ಲಿಮರು ಈ ಖಬರಸ್ತಾನದಲ್ಲಿ ಮೃತರ ಅಂತ್ಯಕ್ರಿಯೆ ಮಾಡುತ್ತ ಬಂದಿದ್ದಾರೆ. ಆದರೆ, ದುಷ್ಕರ್ಮಿಗಳು ಭಾನುವಾರ ತಡರಾತ್ರಿ ಜೆಸಿಬಿಯಿಂದ ಸಮಾಧಿಗಳನ್ನೆಲ್ಲ ನೆಲಸಮಗೊಳಿಸಿದ್ದಾರೆ.
ಈ ಬಗ್ಗೆ ಮುಸ್ಲಿಮ್ ಖಬರಸ್ತಾನ (ಸುನ್ನಿ) ಆಡಿಷನಲ್ ಪ್ರಾಪರ್ಟಿ ಆಫ್ ಮಸೀದಿ-ಇ-ಫಿರ್ದೌಸ್’ನ ಅಧ್ಯಕ್ಷ ಮುಹಮ್ಮದ್ ಗೌಸ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕೃತ್ಯದಿಂದ ಮುಸ್ಲಿಂ ಸಮಾಜದವರಿಗೆ ಮಾನಸಿಕ ಹಿಂಸೆಯಾಗಿದೆ. ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂಬಂಧ ಸೋಮವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.