ಮೋರ್ಬಿ ತೂಗುಸೇತುವೆ ಕುಸಿತ: ನರಹತ್ಯೆ ಪ್ರಕರಣದ ಅಡಿಯಲ್ಲಿ ಒಂಬತ್ತು ಮಂದಿಯ ಬಂಧನ

Prasthutha|

ಮೋರ್ಬಿ: ಗುಜರಾತ್ ನ ಮೊರ್ಬಿ ಸೇತುವೆ ಕುಸಿತಕ್ಕೆ ಸಂಬಂಧಿಸಿದಂತೆ ಸೇತುವೆಯನ್ನು ನವೀಕರಿಸಿದ ಒರೇವಾ ಕಂಪನಿಯ ಅಧಿಕಾರಿಗಳು, ಟಿಕೆಟ್ ಮಾರಾಟಗಾರರು ಮತ್ತು ಭದ್ರತಾ ಸಿಬ್ಬಂದಿ ಸೇರಿದಂತೆ ಒಂಬತ್ತು ಜನರನ್ನು ನರಹತ್ಯೆ ಪ್ರಕರಣದ ಅಡಿಯಲ್ಲಿ ಪೊಲೀಸರು ಬಂಧಿಸಿದ್ದಾರೆ.

- Advertisement -

ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ ನಂತರ ನಾವು ಒಂಬತ್ತು ಜನರನ್ನು ಬಂಧಿಸಿದ್ದೇವೆ. ಬಂಧಿತರಲ್ಲಿ ಒರೇವಾ ಕಂಪನಿಯ ವ್ಯವಸ್ಥಾಪಕರು ಮತ್ತು ಟಿಕೆಟ್ ಗುಮಾಸ್ತರು ಸೇರಿದ್ದಾರೆ ಎಂದು ರಾಜ್ಕೋಟ್ ವಲಯದ ಐಜಿ ಅಶೋಕ್ ಯಾದವ್ ಹೇಳಿದ್ದಾರೆ. ನಮಗೆ ಸಾಕ್ಷ್ಯಾಧಾರಗಳು ದೊರೆತಿದ್ದು, ಪೊಲೀಸರು ಮತ್ತಷ್ಟು ಆರೋಪಿಗಳನ್ನು ಬಂಧಿಸಲಿದ್ದಾರೆ ಎಂದು ಅವರು ಹೇಳಿದರು.

ಮೊರ್ಬಿ ಮಚ್ಚು ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ತೂಗುಸೇತುವೆ ಕುಸಿದು 141ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಸುಮಾರು 100 ಜನರು ಗಾಯಗೊಂಡಿದ್ದಾರೆ.ಗುಜರಾತ್ ಪೊಲೀಸರು ಸೇತುವೆ ಕುಸಿತ ದುರಂತದಲ್ಲಿ ಐಪಿಸಿ 304 ಮತ್ತು 308 (ಅಪರಾಧಿ ನರಹತ್ಯೆ) ಸೆಕ್ಷನ್ ಅಡಿಯಲ್ಲಿ FIR ದಾಖಲಿಸಿದ್ದಾರೆ



Join Whatsapp