ಮೊರ್ಬಿ ಸೇತುವೆ ದುರಂತ: ತನಿಖೆಯ ಮೇಲ್ವಿಚಾರಣೆ ನಡೆಸಲು ಹೈಕೋರ್ಟ್’ಗೆ ಸುಪ್ರೀಂ ಸೂಚನೆ

Prasthutha|

ನವದೆಹಲಿ: ಅಕ್ಟೋಬರ್ 30ರಂದು ನಡೆದ ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ನ್ಯಾಯಾ ಮತ್ತು ಸೂಕ್ತ ಪರಿವಾರ ಸೇರಿದಂತೆ ತನಿಖೆಯ ಎಲ್ಲಾ ಅಂಶಗಳನ್ನು ಪರಿಗಣಿಸುವ ನಿಟ್ಟಿನಲ್ಲಿ ಸ್ವಯಂಪ್ರೇರಿತವಾಗಿ ವಿಚಾರಣೆಯನ್ನು ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೋಮವಾರ ಗುಜರಾತ್ ಹೈಕೋರ್ಟ್’ಗೆ ಸೂಚಿಸಿದೆ.

- Advertisement -

ಈ ಘಟನೆಗೆ ಸಂಬಂಧಿಸಿದಂತೆ ಒಂದೆರಡು ವಿಷಯವನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಹಿಮಾ ಕೊಹ್ಲಿ ಅವರ ಪೀಠವು ಘಟನೆಯನ್ನು ಅಗಾಧ ದುರಂತ ಎಂದು ಬಣ್ಣಿಸಿತ್ತು.

ಈ ಮಧ್ಯೆ ಗುಜರಾತ್ ಹೈಕೋರ್ಟ್ ಈ ವಿಷಯವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ ಮತ್ತು ಅರ್ಜಿದಾರರು ಸ್ವತಂತ್ರ ತನಿಖೆ ನಡೆಸುವ ಮನವಿಯೊಂದಿಗೆ ತಮ್ಮನ್ನು ಸಂಪರ್ಕಿಸಬಹುದು ಎಂದು ಹೈಕೋರ್ಟ್ ತಿಳಿಸಿದೆ.

- Advertisement -

ಮೊರ್ಬಿ ಸೇತುವೆ ದುರಂತಕ್ಕೆ ಸಂಬಂಧಿಸಿ ವಕೀಲ ವಿಶಾಲ್ ತಿವಾರಿ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮತ್ತು ಘಟನೆಯಲ್ಲಿ ಸೋದರ ಮಾವ ಮತ್ತು ಸೊಸೆಯನ್ನು ಕಳೆದುಕೊಂಡ ಛವ್ಡಾ ದಿಲೀಪ್’ಬಾಯ್ ಅವರು ಸಲ್ಲಿಸಿದ ಇನ್ನೊಂದು ಅರ್ಜಿಯನ್ನು ಸುಪ್ರೀಂ ಕೋರ್ಟ್,ಗುಜರಾತ್ ಹೈಕೋರ್ಟ್’ಗೆ ವರ್ಗಾವಣೆ ಮಾಡಿದೆ.



Join Whatsapp