ಮೊರ್ಬಿ ಸೇತುವೆ ಕುಸಿತ: ಆರೋಪಿಗಳ ಪರ ವಕಾಲತ್ತು ವಹಿಸಲು ವಕೀಲರಿಂದ ನಿರಾಕರಣೆ

Prasthutha|

ಗಾಂಧಿನಗರ: ಅಕ್ಟೋಬರ್ 30ರಂದು 135 ಜನರ ಸಾವಿಗೆ ಕಾರಣವಾದ ಮೊರ್ಬಿ ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಬಂಧಿಸಲಾಗಿರುವ ಎಲ್ಲಾ 9 ಆರೋಪಿಗಳ ಪರ ವಕಾಲತ್ತು ವಹಿಸಲು ನಿರಾಕರಿಸಿರುವುದಾಗಿ ಗುಜರಾತಿನ  ವಕೀಲರ ಸಂಘ ಘೋಷಿಸಿದೆ.

- Advertisement -

ಮೊರ್ಬಿಯಲ್ಲಿ ವಕೀಲರು ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.ಈ ಸಂದರ್ಭದಲ್ಲಿ ಮಾತನಾಡಿದ ಮೊರ್ಬಿ ಬಾರ್ ಅಸೋಸಿಯೇಷನ್ ನ ಹಿರಿಯ ವಕೀಲ ಎಸಿ ಪ್ರಜಾಪತಿ , ಮೊರ್ಬಿ ಬ್ರಿಡ್ಜ್ ಕುಸಿತ ಪ್ರಕರಣದಲ್ಲಿ ಒರೆವಾ ಕಂಪನಿಯ ಒಂಬತ್ತು ಆರೋಪಿಗಳನ್ನು  ಬಂಧಿಸಲಾಗಿದೆ. ಮೊರ್ಬಿ ಬಾರ್ ಅಸೋಸಿಯೇಷನ್ ಮತ್ತು ರಾಜ್ಕೋಟ್ ಬಾರ್ ಅಸೋಸಿಯೇಷನ್ ಈ ಪ್ರಕರಣದಲ್ಲಿ ಆರೋಪಿಗಳ ಪ್ರಕರಣವನ್ನು ವಕಾಲತ್ತಿಗೆ ತೆಗೆದುಕೊಳ್ಳದಿರಲು ಮತ್ತು ಅವರನ್ನು ಪ್ರತಿನಿಧಿಸದಿರಲು ನಿರ್ಧರಿಸಿದೆ. ಎರಡೂ ವಕೀಲರ ಸಂಘಗಳು ಈ ನಿರ್ಣಯವನ್ನು ಒಕ್ಕೊರಲಿನಿಂದ ಅಂಗೀಕರಿಸಿವೆ ಎಂದು ಹೇಳಿದರು.

ಗುಜರಾತಿ ಹೊಸ ವರ್ಷದ ದಿನದಂದು ಸ್ಥಳೀಯ ಪುರಸಭೆಗೆ ಮಾಹಿತಿ ನೀಡದೆ ಮೊರ್ಬಿಯಲ್ಲಿ ತೂಗುಸೇತುವೆಯನ್ನು ತೆರೆದುದರ ಕುರಿತಾಗಿ ತನಿಖೆ ನಡೆಸಲಾಗುತ್ತಿದೆ.



Join Whatsapp