ಮೊರ್ಬಿ ಸೇತುವೆ ಕುಸಿತ: ಗುಜರಾತ್ ಹೈಕೋರ್ಟ್ ನಿಂದ ಸ್ವಯಂಪ್ರೇರಿತ ವಿಚಾರಣೆ

Prasthutha|

ಗಾಂಧಿನಗರ: ಅಕ್ಟೋಬರ್ 30 ರಂದು ನಡೆದ ಮೊರ್ಬಿ ಸೇತುವೆ ಕುಸಿತದ ಬಗ್ಗೆ ಗುಜರಾತ್ ಹೈಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆ ನಡೆಸಿದೆ.

- Advertisement -

ಈ ಮೊರ್ಬಿ ಘಟನೆಯ ಬಗ್ಗೆ ನಾವು ಸ್ವಯಂಪ್ರೇರಿತರಾಗಿ ಗಮನ ಹರಿಸಿದ್ದೇವೆ ಎಂದು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರ ಪೀಠವು ತಿಳಿಸಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಜ್ಯದ ಗೃಹ ಇಲಾಖೆ, ಮೊರ್ಬಿ ಮುನ್ಸಿಪಲ್ ಕಾರ್ಪೊರೇಷನ್, ನಗರಾಭಿವೃದ್ಧಿ ಪ್ರಾಧಿಕಾರ ಮತ್ತು ರಾಜ್ಯ ಮಾನವ ಹಕ್ಕುಗಳ ಆಯೋಗವನ್ನು ಪ್ರತಿವಾದಿ-ಪಕ್ಷಕಾರರನ್ನಾಗಿ ಮಾಡಲು ನ್ಯಾಯಾಲಯ ನಿರ್ದೇಶಿಸಿದ್ದು, ಹತ್ತು ದಿನಗಳೊಳಗೆ ಸ್ಥಿತಿಗತಿಯ ವರದಿಯನ್ನು ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರ ಮತ್ತು ಅದರ ಏಜೆನ್ಸಿಗಳಿಗೆ ನೋಟಿಸ್ ಜಾರಿಗೊಳಿಸಿದೆ.

- Advertisement -

ಮಚ್ಚು ನದಿಗೆ ಅಡ್ಡಲಾಗಿ ನೇತಾಡುತ್ತಿದ್ದ 141 ವರ್ಷಗಳಷ್ಟು ಹಳೆಯದಾದ ತೂಗುಸೇತುವೆಯನ್ನು ಎರಡು ವಾರಗಳ ಹಿಂದೆ ಒರೆವಾ ಕಂಪನಿಯ ದುರಸ್ತಿ ಮತ್ತು ನಿರ್ವಹಣೆಯ ನಂತರ ಮತ್ತೆ ತೆರೆಯಲಾಗಿತ್ತು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ನಲ್ಲಿ ಪಿಐಎಲ್ ಸಲ್ಲಿಸಲಾಗಿತ್ತು. ಈ ವಿಚಾರಣೆಯನ್ನು ನವೆಂಬರ್ 14 ರಂದು ನಡೆಸಲಾಗುವುದು.

ಒರೆವಾ ಕಂಪನಿಯ ಇಬ್ಬರು ವ್ಯವಸ್ಥಾಪಕರು ಸೇರಿದಂತೆ ಈ ಪ್ರಕರಣದ ನಾಲ್ವರು ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

Join Whatsapp