ಧರ್ಮಸ್ಥಳದಲ್ಲಿ ನೈತಿಕ ಪೋಲಿಸ್ ಗಿರಿ; ಆಟೋ ಚಾಲಕನಿಗೆ ಹಲ್ಲೆ: ಎಸ್‌ ಡಿಎಯು ಖಂಡನೆ

Prasthutha|

ಬೆಳ್ತಂಗಡಿ: ಧರ್ಮಸ್ಥಳ  ಬಸ್ ನಿಲ್ದಾಣಕ್ಕೆ ಬಾಡಿಗೆ ಹೋಗಿದ್ದ ಉಜಿರೆ ಆಟೋ ಚಾಲಕ ಮಹಮ್ಮದ್ ಅಶಿಕ್ ಹಳೇಪೇಟೆ ತನ್ನ ಅಟೋದಲ್ಲಿ ಹೋಗಿ ಬರುವ ಸಂದರ್ಭದಲ್ಲಿ ನಾಲ್ಕು ಜನರ ತಂಡ ಯದ್ವಾ ತದ್ವಾ ಹಲ್ಲೆ ಗೈದಿದ್ದು ಮಾರಣಾಂತಿಕ  ಹಲ್ಲೆಗೋಳಗಾದ ಅಟೋ ಚಾಲಕನಾದ ಮಹಮ್ಮದ್ ಆಶಿಕ್ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೋಲಿಸರು ಕೂಡಲೇ ಹಲ್ಲೆ ಕೋರರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಎಸ್‌ ಡಿಎಯು ಹೇಳಿದೆ.

- Advertisement -

ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಎಸ್‌ಡಿಎಯು ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸ್ವಾಲಿ ಮದ್ದಡ್ಕ,  ಇತ್ತೀಚಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನೈತಿಕ ಪೋಲಿಸ್ ಗಿರಿ ತಲೆ ಎತ್ತುತ್ತಿದ್ದು ಅದರ ಒಂದು ಭಾಗವಾಗಿದೆ ಈ ರಿಕ್ಷಾ ಚಾಲಕನ ಮೇಲಿನ ಹಲ್ಲೆ, ಪೋಲಿಸರು ಕೂಡಲೇ ಹಲ್ಲೆ ಕೋರರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮವನ್ನು ವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ನೈತಿಕ ಪೋಲಿಸ್ ಗಿರಿ ಮುಂದುವರಿಯುವ ಎಲ್ಲಾ ಸಾಧ್ಯತೆಗಳಿವೆ‌. ಪೋಲಿಸ್ ಇಲಾಖೆಯು  ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆಯ ಅನ್ವಯ ಕೇಸು ದಾಖಲಿಸಿ ಜೈಲಿಗೆ ಹಾಕಬೇಕು ಮತ್ತು ಬೆಳ್ತಂಗಡಿ ತಾಲೂಕಿನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.



Join Whatsapp