ಮೂಡುಶೆಡ್ಡೆ: ಹಯಾತುಲ್ ಇಸ್ಲಾಮ್ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್ ನೇಮಕ

Prasthutha|

ಮಂಗಳೂರು: ಮೂಡುಶೆಡ್ಡೆ ಎದುರುಪದವು ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದ್ರಸದ ವಾರ್ಷಿಕ ಮಹಾಸಭೆ ಮಸೀದಿ ಸಭಾಂಗಣದಲ್ಲಿ ನೆರವೇರಿತು. ಸಭೆಗೆ ಹಯಾತುಲ್ ಇಸ್ಲಾಂ ಬದ್ರಿಯಾ ಜುಮಾ ಮಸೀದಿ ಮತ್ತು ಮದ್ರಸದ ಖತೀಬ್ ಸಫ್ವಾನ್ ಇರ್ಫಾನಿ ದುಅದೊಂದಿಗೆ ಚಾಲನೆ ನೀಡಿದರು. ಬಳಿಕ 2021-22ರ ವಾರ್ಷಿಕ ವರದಿ ಲೆಕ್ಕಪತ್ರ ಮಂಡಿಸಲಾಯಿತು.

- Advertisement -

ಬಳಿಕ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಮುಹಮ್ಮದ್ ಹನೀಫ್ ಮಾತನಾಡಿ, ಮಸೀದಿ ಅಭಿವೃದ್ಧಿ ಕಾರ್ಯದಲ್ಲಿ ಜಮಾಅತ್ ನ ಪ್ರತಿಯೊಬ್ಬರು ಸಹಕರ ನೀಡಿದ್ದು ಮಸೀದಿಯಲ್ಲಿ ವಿವಿಧ ರೀತಿಯ ಯೋಜನೆಗಳನ್ನು ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಜಮಾಅತರು ಇದೇ ರೀತಿಯ ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಈ ವೇಳೆ ನೂತನ ಆಡಳಿತ ಮಂಡಳಿಯನ್ನು ಆಯ್ಕೆ ಮಾಡಲಾಯಿತು. ಸಮಿತಿಯ ನೂತನ ಅಧ್ಯಕ್ಷರಾಗಿ ಮುಹಮ್ಮದ್ ಇಕ್ಬಾಲ್, ಉಪಾಧ್ಯಕ್ಷರಾಗಿ ಇಕ್ಬಾಲ್ ಎ.ಪಿ, ಕಾರ್ಯದರ್ಶಿಯಾಗಿ ಅಹಮ್ಮದ್ ಬಾವ, ಜೊತೆ ಕಾರ್ಯದರ್ಶಿ ಮುಹಮ್ಮದ್ ಆರೀಫ್, ಕೋಶಾಧಿಕಾರಿ ಮನ್ಸೂರ್, ಸದಸ್ಯರಾಗಿ ಅಬ್ದುಲ್ ರಝಾಕ್, ಅಬ್ದುಲ್ ಖಾದರ್, ಶಾಹುಲ್ ಹಮೀದ್, ಸಾಜುದ್ದೀನ್, ಇಕ್ಬಾಲ್, ಸೈಫುದ್ದೀನ್, ಸುಲೈಮಾನ್, ಶೇಖಬ್ಬ ಅಯ್ಕೆಯಾದರು. ಈ ವೇಳೆ ಮಸೀದಿ ಮುಅಲ್ಲಿಂ ಜಾಬಿರ್ ಜೌಹರಿ, ಮುಹಮ್ಮದ್ ಮುಕ್ರಿ, ಹಾಜಿ ಹನೀಫ್ ಮೌಲವಿ ಮತ್ತಿತರರು ಉಪಸ್ಥಿತರಿದ್ದರು.



Join Whatsapp