ಮೂಡಬಿದ್ರೆ: ತಂದೆಯಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ

Prasthutha|

►ಪೋಕ್ಸೊ ಪ್ರಕರಣದಡಿ ಕಾಮುಕ ತಂದೆ ಅರೆಸ್ಟ್

- Advertisement -


ಮೂಡಬಿದ್ರೆ: ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಗರ್ಭಿಣಿಯಾಗಿಸಿದ ಆರೋಪದ ಮೇರೆಗೆ ತಂದೆಯನ್ನು ಮೂಡಬಿದಿರೆ ಪೋಲಿಸರು ಬಂಧಿಸಿದ್ದಾರೆ.


55 ವರ್ಷ ಪ್ರಾಯದ ಕೂಲಿ ಕಾರ್ಮಿಕ ಬಂಧಿತನಾಗಿದ್ದು, ಈತ ಪ್ರೌಢಶಾಲೆಯಲ್ಲಿ ಓದುತ್ತಿರುವ ಮಗಳ ಮೇಲೆ ಆರು ತಿಂಗಳ ಹಿಂದೆ ಮನೆಯಲ್ಲೆ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ.

- Advertisement -


ಇತ್ತೀಚೆಗೆ ಆಕೆಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕರೆದೊಯ್ದಿದ್ದ. ಅಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಮಗಳು 6 ತಿಂಗಳ ಗರ್ಭಿಣಿಯಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ಬಾಲಕಿಯ ತಂದೆಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆರಂಭದಲ್ಲಿ ಬೇರೆಯವರ ಹೆಸರು ಹೇಳಿದ್ದನೆನ್ನಲಾಗಿದೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದನ್ನು ಒಪ್ಪಿಕೊಂಡಿದ್ದಾನೆ.

ಈ ಹಿನ್ನೆಲೆಯಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪೊಕ್ಸೊ ಪ್ರಕರಣ ದಾಖಲಾಗಿದೆ.


ಆರೋಪಿ ಮೂಲತಃ ಕಾರ್ಕಳದವನಾಗಿದ್ದು ದಶಕಗಳ ಹಿಂದೆ ಮೂಡುಬಿದಿರೆ ತಾಲೂಕಿನ ಗ್ರಾಮವೊಂದರ ಸರಕಾರಿ ಜಾಗದಲ್ಲಿ ಮನೆ ಕಟ್ಟಿ ನೆಲೆಸಿದ್ದ ಎನ್ನಲಾಗಿದೆ.



Join Whatsapp