8 ದಿನಗಳ ನವಜಾತ ಅವಳಿ ಶಿಶುಗಳನ್ನು ಎತ್ತಿಕೊಂಡು ಹೋದ ಮಂಗಗಳು; ಒಂದು ಮಗು ಸಾವು

Prasthutha|

ಚೆನ್ನೈ : ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನವಜಾತ ಅವಳಿ ಶಿಶುಗಳನ್ನು ಮಂಗಗಳು ಹೊತ್ತೊಯ್ದ ಘಟನೆ ನಡೆದಿದ್ದು, ಒಂದು ಮಗು ಸಾವಿಗೀಡಾಗಿದೆ. ಇನ್ನೊಂದು ಮಗುವನ್ನು ಸ್ಥಳೀಯರು ರಕ್ಷಿಸಿದ್ದಾರೆ.

- Advertisement -

ತಾಂಜಾವೂರು ಅರಮನೆ ಸಮೀಪದ ಮೇಳ ಅಲಂಗಾಮ್ ಬಳಿಯ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಮನೆ ಛಾವಣಿಯ ಹಂಚು ತೆಗೆದು ಮಂಗಗಳು ಮನೆಯೊಳಗೆ ನುಗ್ಗಿವೆ ಮತ್ತು ನವಜಾತ ಶಿಶುಗಳನ್ನು ಎತ್ತಿಕೊಂಡು ಓಡಿವೆ.

ಮಗುವಿನ ತಂದೆ ಕೆಲಸ ಮಾಡುತ್ತಿದ್ದರೆ, ತಾಯಿ ಅಡುಗೆ ಮಾಡುತ್ತಿದ್ದರು. ಅವಳಿ ನವಜಾತ ಶಿಶುಗಳು ಜನಿಸಿ 8 ದಿನಗಳಷ್ಟೇ ಆಗಿವೆ. ಸದ್ದು ಕೇಳಿ ತಾಯಿ ಓಡಿ ಬಂದಾಗ ಮಂಗಗಳು ಮಕ್ಕಳನ್ನು ಎತ್ತಿಕೊಂಡು ಓಡುತ್ತಿರುವುದು ಕಂಡಿದ್ದ ಆಘಾತಕ್ಕೊಳಗಾಗಿದ್ದಾರೆ.

- Advertisement -

ಸ್ಥಳೀಯರು ಧಾವಿಸಿ, ಒಂದು ಮಗುವನ್ನು ಛಾವಣಿಯಿಂದ ರಕ್ಷಿಸಿದ್ದಾರೆ. ಮೃತ ಮಗುವಿನ ಶವ ಕಂದಕವೊಂದರಲ್ಲಿ ಪತ್ತೆಯಾಗಿದೆ.

Join Whatsapp