ಭಾರತದ ಮಂಗವೊಂದು ಭಾರತದ ಗಡಿ ದಾಟಿ ಹೋಗಿ ಪಾಕಿಸ್ತಾನದ ಸೈನಿಕರ ಕೈಗೆ ಸಿಕ್ಕಿಬಿದ್ದಿದೆ.
ಮಂಗನನ್ನು ಬಹಾವಲ್ಪುರ ಮೃಗಾಲಯಕ್ಕೆ ಒಯ್ದಾಗ ಬೇರೆ ದೇಶದ ಮಂಗಕ್ಕೆ ಕೆಲವು ನಿಯಮಗಳನ್ನು ಅನುಸರಿಸಬೇಕಾಗಿರುವುದರಿಂದ ಅವರು ಸ್ವೀಕರಿಸಲಿಲ್ಲ.
ಏನು ಮಾಡುವುದು ಎಂದು ತಲೆ ಕರೆದುಕೊಳ್ಳುತ್ತಿದ್ದ ಸೈನಿಕರಿಗೆ ಭಾರತದ ಕಡೆ ಒಬ್ಬ ಮಂಗ ಆಡಿಸುವವನು ಹೋಗುವುದು ಕಾಣಿಸಿದೆ. ಕೊನೆಗೆ ನೋ ಮ್ಯಾನ್ಸ್ ಲ್ಯಾಂಡ್ ಗೆರೆಯಲ್ಲಿ ಆ ಮಂಗವನ್ನು ಆತನಿಗೆ ನೀಡಿರುವುದಾಗಿ ತಿಳಿದು ಬಂದಿದೆ.