‘ಮನಿ ಮ್ಯಾಗ್ನೆಟ್’ ರಾಕೇಶ್ ಜುಂಝನ್ ವಾಲಾ ನಿಧನ

Prasthutha|

ಮುಂಬೈ: ‘ಆಕಾಶ್ ಏರ್’ವಿಮಾನಯಾನ ಕಂಪನಿ ಸ್ಥಾಪಕ ರಾಕೇಶ್ ಜುಂಝನ್ ವಾಲಾ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ.
ಅವರಿಗೆ 62 ವರ್ಷ ವಯಸ್ಸಾಗಿತ್ತು.


ಉದ್ಯಮಿ ರಾಕೇಶ್ ಜುಂಝನ್ ವಾಲಾ ಅವರು ಬಹುಅಂಗಾಂಗ ವೈಫಲ್ಯಗಳಿಂದ ಬಳಲುತ್ತಿದ್ದರು. ಅವರು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 6:30ಕ್ಕೆ ಕೊನೆಯುಸಿರೆಳೆದಿದ್ದಾರೆ.

- Advertisement -


ಐದು ಸಾವಿರ ರೂಪಾಯಿಂದ ಷೇರು ವಹಿವಾಟ ಆರಂಭಿಸಿದ ಇವರು 5.8 ಶತಕೋಟಿ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ) ನಿವ್ವಳ ಆಸ್ತಿ ಹೊಂದಿದ್ದರು. ಷೇರು ಮಾರುಕಟ್ಟೆಯ ‘ಬಿಗ್ ಬುಲ್’ ಎಂದೇ ಖ್ಯಾತಿಯಾಗಿದ್ದರು.


ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ‘ರಾಕೇಶ್ ಜುಂಝನ್ ವಾಲಾ ಅವರು ಅದಮ್ಯ ವ್ಯಕ್ತಿ. ಅವರ ಸಂಪೂರ್ಣ ಬದುಕು ವಿನೋದ ಮತ್ತು ಗಂಭೀರದಿಂದ ಕೂಡಿದ್ದು, ಹಣಕಾಸು ಪ್ರಪಂಚಕ್ಕೆ ಅಳಿಸಲಾಗದ ಕೊಡುಗೆಯನ್ನು ಬಿಟ್ಟು ಹೋಗಿದ್ದಾರೆ. ಭಾರತದ ಪ್ರಗತಿಗೆ ಸದಾ ಭಾವೋದ್ರಿಕ್ತರಾಗಿದ್ದರು. ಅವರ ಅಗಲಿಕೆ ಬೇಸರವನ್ನುಂಟು ಮಾಡಿದೆ. ಅವರ ಕುಟುಂಬಕ್ಕೆ ಮತ್ತು ಹಿತೈಷಿಗಳಿಗೆ ನನ್ನ ಸಂತಾಪಗಳು. ಓಂ ಶಾಂತಿ’ ಎಂದು ಟ್ವೀಟ್ ಮಾಡಿದ್ದಾರೆ.

- Advertisement -