ಮೈಸೂರು: ಬೆಂಗಳೂರಿನಲ್ಲಿ ನಡೆದ ಐಟಿ ದಾಳಿಯಲ್ಲಿ ಪತ್ತೆಯಾದ ಹಣದ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿ ರಾಜ್ಯದಲ್ಲಿ ವೈಎಸ್ಟಿ (ಯತೀಂದ್ರ ಸಿದ್ದರಾಮಯ್ಯ ಟ್ಯಾಕ್ಸ್) ಆಯ್ತು, ಈಗ ಎಸ್ಎಸ್ ಟಿ (ಡಿಕೆ ಸುರೇಶ್, ಡಿಕೆ ಶಿವಕುಮಾರ್ ಟ್ಯಾಕ್ಸ್) ಕಲೆಕ್ಷನ್ ಆರಂಭವಾಗಿದೆ.
ಐಟಿ ದಾಳಿ ವೇಳೆ ಸಿಕ್ಕಿರುವ ಹಣ ಎಸ್ಎಸ್ಟಿ ಟ್ಯಾಕ್ಸ್ ಗೆ ಸೇರಿದ್ದು ಎಂದು ಆರೋಪಿಸಿದರು.
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಅಂಬಿಕಾಪತಿ ನಿವಾಸದಲ್ಲಿ ಸಿಕ್ಕಿರುವ ಹಣ ಎಸ್ಎಸ್ ಟಿ ಕಲೆಕ್ಷನ್. ಸಂತೋಷ್ ಮನೆಯಲ್ಲಿ ಸಿಕ್ಕಿದ್ದು ವೈಎಸ್ಟಿ ಕಲೆಕ್ಷನ್. ಮುಖ್ಯಮಂತ್ರಿಗಳು ಈ ಕುರಿತು ತನಿಖೆ ಮಾಡಿಸಿ ಪ್ರಾಮಾಣಿಕತೆ ತೋರಬೇಕು. ಭ್ರಷ್ಟಾಚಾರ ಮಾಡಿ ಪ್ರಾರ್ಥಿಸಿದರೆ ದೇವರ ಕ್ಷಮಿಸಲ್ಲ. ಲೂಟಿ ಮಾಡುವವರು ತಿಹಾರ್ ಜೈಲಿಗೆ ಹೋಗುವುದು ತಪ್ಪುವುದಿಲ್ಲ. ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಲು ಇಲಾಖೆಗಳು ಪೈಪೋಟಿಗೆ ಬಿದ್ದಿವೆ. ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದಕ್ಕೆ ಹಣ ಪತ್ತೆಗಿಂತ ಬೇರೆ ಸಾಕ್ಷಿಬೇಕೆ ? ಎಂದು ವಾಗ್ದಾಳಿ ಮಾಡಿದರು.