ಮೋಹನ್ ಭಾಗವತ್ ರ ಹಿಂದುತ್ವ ರಾಷ್ಟ್ರ ಘೋಷಣೆ ದೇಶವನ್ನು ನಾಶಗೊಳಿಸಲಿದೆ: ಎಂ.ಕೆ.ಫೈಝಿ ಎಚ್ಚರಿಕೆ

Prasthutha|

ನವದೆಹಲಿ: ವಿಜಯ ದಶಮಿ ದಿನದಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿದ ಹಿಂದುತ್ವ ರಾಷ್ಟ್ರ ಹೇಳಿಕೆಯು ಎಂ. ಎಸ್. ಗೋಲ್ವಾಲ್ಕರ್ ಅವರ ತತ್ವವೇ ಆಗಿದೆ. ಈ ಘೋಷಣೆಯು ಭಾರತದ ಬಹುತ್ವ ನಾಶಮಾಡಿ, ವಿವಿಧತೆಯಲ್ಲಿ ಏಕತೆ ಎಂಬುದನ್ನು ಧ್ವಂಸ ಮಾಡಿ ಸಂವಿಧಾನ ವಿರುದ್ಧವಾಗಿ ಭಾರತದ ಬಹುತ್ವ, ಜಾತ್ಯತೀತತೆಯನ್ನು ಕೊಲ್ಲುತ್ತದೆ, ಭೌಗೋಳಿಕ ಅಸಮತೋಲನಕ್ಕೆ ದಾರಿ ಮಾಡುತ್ತದೆ ಎಂದು ಎಸ್ ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಎಚ್ಚರಿಸಿದ್ದಾರೆ.

- Advertisement -

ಸಂಘ ಪರಿವಾರವು ಎಂಟು ವರ್ಷಗಳ ಹಿಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಂದಿನಿಂದ ದೇಶದ ಅಭಿವೃದ್ಧಿಯು ಎಲ್ಲ ನಿಟ್ಟಿನಲ್ಲಿಯೂ ಕೆಳಮುಖವಾಗಿ ಚಲಿಸುತ್ತಿದೆ. ಆರೆಸ್ಸೆಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆಯವರೇ ಈ ಆಡಳಿತದಲ್ಲಿ ನಿರುದ್ಯೋಗ ಮತ್ತು ಹಣಕಾಸಿನ ಅಸಮಾನತೆ ವೃದ್ಧಿಸಿದ್ದಾಗಿ ಹಾಗೂ ಬಡತನ ರಾಕ್ಷಸಾಕಾರ ತಾಳಿದ್ದಾಗಿ ಹೇಳಿದ್ದಾರೆ. ಅವರಂದಂತೆ ಭಾರತದ 20 ಕೋಟಿ ಜನರು ಬಡತನ ರೇಖೆಗಿಂತ ಕೆಳಗಿದ್ದಾರೆ. 3 ಕೋಟಿ ಜನರು ದಿನಕ್ಕೆ ರೂ. 375ಕ್ಕಿಂತ ಕಡಿಮೆ ಸಂಪಾದಿಸುತ್ತಾರೆ. ನಿರುದ್ಯೋಗಿಗಳ ಸಂಖ್ಯೆ 4 ಕೋಟಿಗಿಂತ ಹೆಚ್ಚು; ನಿರುದ್ಯೋಗ ಪ್ರಮಾಣವು ಲೇಬರ್ ಫೋರ್ಸ್ ಸರ್ವೆಯಂತೆ 7.6% ಇದೆ. ಹೊಸಬಾಳೆಯವರಂತೆ ದೇಶದ ಬಹುತೇಕರಿಗೆ ಒಳ್ಳೆಯ ನೀರು, ಒಳ್ಳೆಯ ಆಹಾರ ಸಿಗುತ್ತಿಲ್ಲ. ದೇಶದ ಐದನೇ ಒಂದು ಭಾಗ ಸಂಪತ್ತು 1% ಜನರ ಕೈಯಲ್ಲಿರುವುದು ಯಾವ ನ್ಯಾಯ? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜಾಸತ್ತಾತ್ಮಕ ಜನರು, ಫ್ಯಾಶಿಸ್ಟ್ ವಿರೋಧಿ ಶಕ್ತಿಗಳು, ಪಕ್ಷಗಳು, ಮಾನವ ಹಕ್ಕುಗಳ ಸಂಘಟನೆಗಳವರು ಹಲವಾರು ಕಾಲದಿಂದ ಹೇಳುವುದನ್ನೇ ಹೊಸಬಾಳೆಯವರು ಮತ್ತೆ ಹೇಳಿದ್ದಾರೆ ಅಷ್ಟೆ. ಆದರೆ ಸಂಘ ಪರಿವಾರದ ಒಬ್ಬರು ಇದನ್ನು ಹೇಳುವುದೆಂದರೆ ದೇಶವನ್ನು ಧಿಕ್ಕರಿಸಿ, ಕೆಳಗಿಳಿಸಿ ಮಾತನಾಡುತ್ತಿದ್ದಾರೆಂದು ಅರ್ಥ ಎಂದು ಎಂ.ಕೆ.ಫೈಝಿ ಹೇಳಿದ್ದಾರೆ.

- Advertisement -

ದೇಶವು ಈ ಎಲ್ಲಾ ಸಮಸ್ಯೆಗಳಿಂದ ಬಳಲುತ್ತಿರುವಾಗ ಭಾಗವತ್ ರ ಹೇಳಿಕೆಯು ಅದಕ್ಕೆ ಯಾವುದೇ ಪರಿಹಾರವನ್ನು ಸೂಚಿಸುವುದಿಲ್ಲ. ಸಂಘ ಪರಿವಾರ ಅಧಿಕಾರಕ್ಕೆ ಬಂದಂದಿನಿಂದ ಹೆಚ್ಚುತ್ತಿರುವ ಕೋಮು ಧ್ರುವೀಕರಣವನ್ನು ಮತ್ತಷ್ಟು ಹೆಚ್ಚಿಸಲು ಅವರು ಪ್ರಯತ್ನಿಸಿದ್ದಾರೆ. ಕಡ್ಡಾಯದ ಮತಾಂತರ, ಧರ್ಮ ಕಾರಣದ ಅಸಮಾನತೆಯಿಂದ ದೇಶವು ತನ್ನ ಹೆಗ್ಗುರುತು ಅಸ್ಮಿತೆಯನ್ನು ಕಳೆದುಕೊಳ್ಳುವುದಾಗಿ ಭಾಗವತ್ ಹೇಳುತ್ತಾರೆ. ಸದ್ಯದ ಅಂಕಿ ಅಂಶದಂತೆ ಬಹುಸಂಖ್ಯಾತರ ಜನ ಸಂಖ್ಯೆಯು 86% ಇದ್ದರೆ, ಇತರರ ಸಂಖ್ಯೆಯು 14% ಇದೆ. ಇಷ್ಟಾದರೂ ಭಾಗವತ್ ಅವರು ಹೆಚ್ಚು ಮಗು ಹೆರುವುದು, ಬಲವಂತದ ಮತಾಂತರ, ಗಡಿ ನುಸುಳಿ ಬರುವಿಕೆ ಇತ್ಯಾದಿಯಿಂದ ಭೌಗೋಳಿಕ ಧಾರ್ಮಿಕ ಅಸಮಾನತೆ ಉಂಟಾಗುತ್ತದೆ ಎಂದು ಹೇಳುತ್ತಿರುವುದು ಸರಿಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಸಂಘ ಪರಿವಾರದ ಮುಖ್ಯಸ್ಥರು ಯಾವುದೇ ಅಧಾರವಿಲ್ಲದೆ ಹಿಂದಿನಿಂದಲೂ ಮುಸ್ಲಿಮರು ಭಾರತವನ್ನು ಇಸ್ಲಾಂ ರಾಷ್ಟ್ರ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಾರೆ. ಮಾತ್ರವಲ್ಲ ಭಾರತವನ್ನು ಹಿಂದುತ್ವ ರಾಷ್ಟ್ರ ಮಾಡುವುದು ನಮ್ಮ ಕರ್ತವ್ಯ ಎನ್ನುತ್ತ ಮತ ಧ್ರುವೀಕರಣ ನಡೆಸುತ್ತಾರೆ. ಅವರ ಅಂತಿಮ ಗುರಿ ಮುಸ್ಲಿಮರು ಎರಡನೇ ದರ್ಜೆ ಪ್ರಜೆಗಳಾಗಿರಬೇಕು, ಅವರಿಗೆ ನಾಗರಿಕ, ಪೌರ ಹಕ್ಕುಗಳು ಎಲ್ಲ ಸಿಗಬಾರದು ಎಂಬ ಸಂಘೀ ದೃಷ್ಟಿಕೋನವೆ ಆಗಿದೆ ಎಂದು ಎಂ.ಕೆ.ಫೈಝಿ ಹೇಳಿದ್ದಾರೆ.

ಕೇಂದ್ರದ ಆಡಳಿತ ಆರೆಸ್ಸೆಸ್ಸಿನವರ ಕೈಯಲ್ಲಿರುವಂತೆ ಅವರ ರಾಜಕೀಯ ವ್ಯವಸ್ಥೆ. ಆದ್ದರಿಂದ ಭಾಗವತ್ ರ ಹಿಂದುತ್ವ ರಾಷ್ಟ್ರ ಹೇಳಿಕೆಯು ತೀವ್ರವಾಗಿ ಚರ್ಚೆಯಾಗಬೇಕಾದ ವಿಷಯವಾಗಿದೆ. ಯಾರೆಲ್ಲ ಭಾರತ ಜಾತ್ಯತೀತ ಆಗಿರಬೇಕು ಎಂದು ಬಯಸುತ್ತಾರೋ ಅವರೆಲ್ಲ ಈ ನಿಟ್ಟಿನಲ್ಲಿ ಭಾಗವತ್ ಹೇಳಿಕೆಯನ್ನು ಖಂಡಿಸಬೇಕಾಗಿದೆ ಎಂದು ಎಂ.ಕೆ.ಫೈಝಿ ತಿಳಿಸಿದ್ದಾರೆ.



Join Whatsapp