ಮಾಂಸ ತಿನ್ನುವವರು ತಪ್ಪು ದಾರಿ ಹಿಡಿಯುತ್ತಿದ್ದಾರೆ: ಮೋಹನ್ ಭಾಗವತ್ ವಿವಾದಾತ್ಮಕ ಹೇಳಿಕೆ

Prasthutha|

- Advertisement -

ನವದೆಹಲಿ: ಮಾಂಸ ತಿನ್ನುವವರು ತಪ್ಪು ದಾರಿ ಹಿಡಿಯುತ್ತಿದ್ದಾರೆ ಎಂದು ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಆರ್ ಎಸ್ ಎಸ್ ನ ಸಹವರ್ತಿ ಸಂಘಟನೆಯಾದ ಭಾರತ್ ವಿಕಾಸ್ ಮಂಚ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಂಸಾಹಾರ ಒಂದು ತಪ್ಪು ರೀತಿಯ ಆಹಾರ ಪದ್ದತಿ. ಹಿಂಸೆಗೆ ದಾರಿ ಮಾಡಿಕೊಡುವ ಆಹಾರವನ್ನು ನಾವು ಪ್ರೋತ್ಸಾಹಿಸಬಾರದು. ತಪ್ಪು ರೀತಿಯ ಆಹಾರ ಪದ್ಧತಿ ಹಾಗೂ ಕೆಟ್ಟ ಆಹಾರವನ್ನು ಸೇವಿಸಿದರೆ ಮಾನಸಿಕವಾಗಿಯೂ ಅದು ನಮ್ಮನ್ನು ತಪ್ಪು ದಾರಿಗೆ ಕೊಂಡೊಯ್ಯುತ್ತದೆ. ಮಾಂಸಾಹಾರ ಹಿಂಸೆಯನ್ನು ಉತ್ತೇಜಿಸುವ ಆಹಾರ ಪದ್ಧತಿ. ಹಾಗಾಗಿ ನಾವು ಮಾಂಸಾಹಾರದಿಂದ ದೂರವೇ ಇರಬೇಕು ಎಂದು ಹೇಳಿದ್ದಾರೆ.

Join Whatsapp