ಮುಹಮ್ಮದ್ ಝುಬೈರ್ ಗೆ ಜಾಮೀನು ನಿರಾಕರಣೆ, 14 ದಿನ ನ್ಯಾಯಾಂಗ ಬಂಧನ

Prasthutha|

ನವದೆಹಲಿ: 2018ರ ಆಕ್ಷೇಪಾರ್ಹ ಟ್ವೀಟ್ ಗಾಗಿ ಮೊನ್ನೆ ಬಂಧಿತರಾಗಿರುವ ಆಲ್ಟ್ ನ್ಯೂಸ್ ನ ಸಹ ಸ್ಥಾಪಕ ಮುಹಮ್ಮದ್ ಝುಬೈರ್ ಅವರಿಗೆ ಜಾಮೀನು ನಿರಾಕರಿಸಿರುವ ಪಾಟಿಯಾಲ ಹೌಸ್ ಕೋರ್ಟ್, ಪತ್ರಕರ್ತನನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ.

- Advertisement -

ಈ ಮಧ್ಯೆ ಝುಬೈರ್ ವಿರುದ್ಧ ದಿಲ್ಲಿ ಪೊಲೀಸರು ಹೆಚ್ಚುವರಿ ಆರೋಪಗಳನ್ನು ಸೇರಿಸಿದ್ದಾರೆ.

 ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಹೊಸ ಆರೋಪ ಸೇರಿಸಿ ಪಾಟಿಯಾಲ ಹೌಸ್ ಕೋರ್ಟಿಗೆ ಸಲ್ಲಿಸಲಾಯಿತು. ಹೊಸ ಆರೋಪಗಳನ್ನು ಎಫ್ ಸಿಆರ್ ಎ-  ವಿದೇಶಿ ದೇಣಿಗೆ ನಿರ್ಬಂಧ ಕಾಯ್ದೆಯ ಸೆಕ್ಷನ್ 35ರಂತೆ ಸೇರಿಸಲಾಗಿದೆ.

- Advertisement -

ವಿದೇಶಿ ದೇಣಿಗೆ ನಿರ್ಬಂಧ ಕಾಯ್ದೆಯ ಸೆಕ್ಷನ್ 35ರಂತೆ ಕ್ರಿಮಿನಲ್ ಸಂಚು ಮತ್ತು ಸಾಕ್ಷ್ಯ ನಾಶದ ಆರೋಪ ಸೇರಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಪಾಟಿಯಾಲ ಹೌಸ್ ಕೋರ್ಟ್ ಗೆ ತಿಳಿಸಿದರು.

ಕ್ರಿಮಿನಲ್ ಸಂಚು ಆರೋಪ ಸೇರಿರುವುದರಿಂದ ಇಡಿ- ಜಾರಿ ನಿರ್ದೇಶನಾಲಯದವರು ಅಕ್ರಮ ಹಣ ವರ್ಗಾವಣೆ ಎಂದು ಈ ಮೊಕದ್ದಮೆಗೆ ಕಾಲಿಡುತ್ತಿದ್ದಾರೆ.

ದಿಲ್ಲಿ ಪೊಲೀಸರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕೂಡ ಕೇಳಿಕೊಂಡಿದ್ದಾರೆ. ಆಲ್ಟ್ ನ್ಯೂಸ್ ವಕೀಲರು ಅದೇ ವೇಳೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಧಾರ್ಮಿಕ ಭಾವನೆಗೆ ನೋವುಂಟು ಮಾಡಿದ ಹಿಂದಿನ ಪೋಸ್ಟ್ ಗಾಗಿ ಜೂನ್ 27ರಂದು ದಿಲ್ಲಿ ಪೊಲೀಸರು ಮುಹಮ್ಮದ್ ಝುಬೈರ್ ರನ್ನು ಬಂಧಿಸಿದ್ದಾರೆ. ಅಂದೇ ಟ್ರಯಲ್ ಕೋರ್ಟಿನಿಂದ ಒಂದು ದಿನ  ಪೊಲೀಸ್ ಕಸ್ಟಡಿಗೆ ಪಡೆದಿದ್ದರು. 

ಪ್ರವಾದಿ ಮುಹಮ್ಮದ್ ರ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಮಾಡಿದ್ದ ಕಿಡಿಗೇಡಿತನದ ಹೇಳಿಕೆ ಬಗ್ಗೆ ಝುಬೈರ್ ಅವರು ವೀಡಿಯೋ ಒಂದನ್ನು ಹರಿಬಿಟ್ಟ ಮರುದಿನ ದಿಲ್ಲಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.

ಟ್ವಿಟರ್ ಬಳಕೆದಾರರು ಧಾರ್ಮಿಕ ಭಾವನೆಗೆ ನೋವಾಗಿದೆ ಎಂದು ದೂರಿದ್ದರಿಂದ ಝುಬೈರ್ ರನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದರು. ಆದರೆ ಈಗ ದೂರುದಾರರು ತಮ್ಮ ಟ್ವಿಟ್ಟರ್ ಖಾತೆ ಸ್ಥಗಿತಗೊಳಿಸಿದ್ದಾರೆ. ಹಾಗಾಗಿ ದೂರುದಾರರು ಯಾರು ಎಂಬುದು ಇನ್ನೂ ಗೊತ್ತಾಗಿಲ್ಲ.



Join Whatsapp