ಟೀಂ ಇಂಡಿಯಾ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತ

Prasthutha|

ಚೈಪುರ್ : ಲಾಲ್ಸೋಟ್ ಕೋಟಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮುಹಮ್ಮದ್ ಅಝರುದ್ದೀನ್ ಕಾರು ಅಪಘಾತವಾಗಿದೆ. ಅಪಘಾತದಲ್ಲಿ ಸಿಲುಕಿದ ಅಝರುದ್ದೀನ್ ಅವರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾಜಸ್ಥಾನದ ಸುರ್ವಾಲದಲ್ಲಿ ಈ ಘಟನೆ ನಡೆದಿದೆ.

- Advertisement -

ಈ ಕುರಿತಂತೆ ಅಝರುದ್ದೀನ್ ಆಪ್ತ ಸಹಾಯಕ ಮಾಹಿತಿ ಹಂಚಿಕೊಂಡಿದ್ದು, ರಾಜಸ್ಥಾನದ ಸುರ್ವಾಲ ಹತ್ತಿರದ ಲಾಲ್ಸೋಟ್ ಕೋಟಾ ಹೈವೇನಲ್ಲಿ ಮುಹಮ್ಮದ್ ಅಝಝದ್ದೀನ್ ಕುಟುಂಬದೊಂದಿಗೆ ರಣಥಂಬೋರ್ ಗೆ ಆಗಮಿಸುತ್ತಿದ್ದಾಗ ಕಾರು ಅಪಘಾತಗೊಂಡಿದೆ. ಅವರು, ಅವರ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

Join Whatsapp