ಯವತ್ಮಾಲ್: ಇಸ್ಲಾಮಿಕ್ ವಿದ್ವಾಂಸ ಮತ್ತು ಸಾಮಾಝಿಕ ಕಾರ್ಯಕರ್ತ ಮುಹಮ್ಮದ್ ಜಿಯಾವುದ್ದೀನ್ ಸಿದ್ದಿಕಿ ಅವರು ಪ್ರಮುಖ ಧಾರ್ಮಿಕ ಸಂಘಟನೆಯಾದ ವಹ್ದತ್ ಇ ಇಸ್ಲಾಮಿ ಹಿಂದ್ (ಡಬ್ಲ್ಯುಐಎಚ್)ನ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ.
ಸಿದ್ದಿಕಿ ಅವರು ಪ್ರಮುಖ ಧಾರ್ಮಿಕ ವಿದ್ವಾಂಸರಾಗಿದ್ದು, ಮಹಾರಾಷ್ಟ್ರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಮಾಜಿಕ ಮತ್ತು ಕಲ್ಯಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತರ್ಜುಮಾನ್-ಎ-ಮಿಲ್ಲತ್ ಪತ್ರಿಕೆಯ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಮಹಾರಾಷ್ಟ್ರದ ಯವತ್ಮಾಲ್ ನಗರದಲ್ಲಿ ನಡೆದ ಮೂರು ದಿನಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸಿದ್ದಿಕಿ ಅವರನ್ನು WIF ಮುಖ್ಯಸ್ಥರು ಆಯ್ಕೆ ಮಾಡಿದ್ದಾರೆ. ಬಹುಕಾಲದಿಂದ ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಅಧ್ಯಕ್ಷ ಮೌಲಾನಾ ಅತಾವುರ್ರಹ್ಮಾನ್ ವಾಜ್ದಿ ಅವರ ಸೂಚನೆ ಮೇರೆಗೆ ಸಭೆ ನಡೆಸಲಾಗಿತ್ತು.