ಮೊಯಿನ್ ಅಲಿಗೆ ವೀಸಾ ಸಮಸ್ಯೆ | ಕೆಕೆಆರ್ ವಿರುದ್ಧದ ಮೊದಲ ಪಂದ್ಯಕ್ಕೆ ಡೌಟ್!

Prasthutha|

ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಆಟಗಾರ ಮೊಯಿನ್ ಅಲಿಗೆ ವೀಸಾ ಸಮಸಯೆ ಎದುರಾಗಿದೆ. ಹೀಗಾಗಿ ಇನ್ನೂ ತಂಡವನ್ನು ಸೇರಿಕೊಳ್ಳಲಾಗದ ಮೊಯಿನ್ ಅಲಿ ಮಾರ್ಚ್ 26ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವುದು ಅನುಮಾನ ವ್ಯಕ್ತವಾಗಿದೆ.

- Advertisement -

ಭಾರತಕ್ಕೆ ಬರಲು ಮೊಯಿನ್ ಅಲಿ ಅವರ ವೀಸಾವನ್ನು ಇನ್ನೂ ಅನುಮೋದಿಸಲಾಗಿಲ್ಲ. ಶೀಘ್ರದಲ್ಲೇ ಸಮಸ್ಯೆಯನ್ನು ಪರಿಹರಿಸುವ ವಿಶ್ವಾಸವನ್ನು ಸಿಎಸ್‌ಕೆ ಸಿಇಒ ಕಾಸಿ ವಿಶ್ವನಾಥನ್ ಅವರು ವ್ಯಕ್ತಪಡಿಸಿದ್ದಾರೆ.

ಮಾರ್ಚ್ 26ರಂದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ ಮೊದಲ ಪಂದ್ಯವನ್ನು ಆಡಲಿದೆ.

Join Whatsapp