ಕಾಂಗ್ರೆಸ್ ನಿಂದಾಗಿ ಪ್ರಧಾನಿ ಮೋದಿ ಬಲಶಾಲಿ: ಮಮತಾ ಬ್ಯಾನರ್ಜಿ ವಾಗ್ದಾಳಿ

Prasthutha|

ಪಣಜಿ: ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದ ಕಾಂಗ್ರೆಸ್ ನ ನಡೆಯೇ ದೇಶದಲ್ಲಿ ಮೋದಿ ಬಲಿಷ್ಠರಾಗಲು ಕಾರಣ. ಕಾಂಗ್ರೆಸ್ ಸರಿಯಾದ ಸಮಯಕ್ಕೆ ಸಮರ್ಪಕ ತೀರ್ಮಾನ ಕೈಗೊಳ್ಳುತ್ತಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಆರೋಪಿಸಿದ್ದಾರೆ.

- Advertisement -

ಬಿಜೆಪಿ ಪಕ್ಷದ ಪ್ರಚಾರಕರಂತೆ ಕಾಂಗ್ರೆಸ್ ವರ್ತಿಸುತ್ತಿದೆ. ಮಾತ್ರವಲ್ಲ ಪ್ರಸಕ್ತ ದೇಶದಲ್ಲಿರುವ ರಾಜಕೀಯ ವಿದ್ಯಮಾನವನ್ನು ಕಾಂಗ್ರೆಸ್ ಗಂಭೀರವಾಗಿ ಸ್ವೀಕರಿಸಿಲ್ಲ. ಸೂಕ್ತ ಸಮಯದಲ್ಲಿ ಸ್ವಂತ ನಿರ್ಧಾರವನ್ನು ಕೈಗೊಳ್ಳಲು ಕಾಂಗ್ರೆಸ್ ಪ್ರೌಢತೆಯನ್ನು ಹೊಂದಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.

ಮುಂಬರುವ ಗೋವಾ ಅಸೆಂಬ್ಲಿ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಟಿ.ಎಂ.ಸಿ ಮೈತ್ರಿಗೆ ಮುಂದಾಗಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಮತಾ, ಈ ರೀತಿಯ ಅಲೋಚನೆಯೇ ಪಕ್ಷದ ಮುಂದಿಲ್ಲ ಎಂದು ಹೇಳಿದರು.

- Advertisement -

ದೇಶದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಬಿಜೆಪಿಯನ್ನು ತಡೆಯುವಲ್ಲಿ ಪ್ರತಿಪಕ್ಷಗಳು ಐಕ್ಯತೆಯನ್ನು ಪ್ರದರ್ಶಿಸಬೇಕಾದ ಅಗತ್ಯವನ್ನು ಗುರುತಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಮತ್ತು ಬಿಜೆಪಿಯನ್ನು ಎದುರಿಸಿ ಭಾರತದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.

ಮುಂದಿನ ವರ್ಷ 40 ಸೀಟಿನ ಗೋವಾ ಅಸೆಂಬ್ಲಿ ಚುನಾವಣೆ ನಡೆಯಲಿದ್ದು, ಈಗಲೇ ಕಾಂಗ್ರೆಸ್, ಬಿಜೆಪಿ, ಟಿ.ಎಮ್.ಸಿ ಆಮ್ ಆದ್ಮಿ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಚುನಾವಣಾ ಅಖಾಡಕ್ಕೆ ಧುಮುಕಿವೆ. ಮಾತ್ರವಲ್ಲ ಬಹುತೇಕ ಎಲ್ಲಾ ಪಕ್ಷಗಳು ಮತದಾರರ ಓಲೈಕೆಗೆ ಮುಂದಾಗಿದೆ.

Join Whatsapp