ಮತ್ತೆ ಮೋದಿ ವಿವಾದಿತ ಕೃಷಿ ಕಾಯ್ದೆಯನ್ನು ಜಾರಿಗೆ ತರಲಿದ್ದಾರೆ: ಕಲ್ಲಡ್ಕ ಪ್ರಭಾಕರ ಭಟ್

Prasthutha|

ಉಡುಪಿ: ವಿವಾದಿತ ಕೃಷಿ ಕಾಯ್ದೆಯನ್ನು ನರೇಂದ್ರ ಮೋದಿ ಕಾರ್ಯರೂಪಕ್ಕೆ ತರಲಿದ್ದಾರೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

- Advertisement -

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಅವರು, ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಕೃಷಿ ಕಾಯ್ದೆ ಒಳ್ಳೆಯದೇ ಇತ್ತು. ವಿಪಕ್ಷಗಳು ವಿರೋಧ ಮಾಡಿದ್ದರಿಂದ ಸಮಸ್ಯೆ ಆಯ್ತು. ಹಾಗಂತ, ಮೋದಿ ಇದನ್ನು ಹಾಗೇ ಬಿಡೋದಿಲ್ಲ. ಮುಂದಕ್ಕೆ ಅದನ್ನು ಕಾರ್ಯರೂಪಕ್ಕೆ ತಂದೇ ತರಲಿದ್ದಾರೆ ಎಂದು ಹೇಳಿದ್ದಾರೆ.

ಕೃಷಿ ಕಾಯ್ದೆಯ ಒಳ್ಳೆಯ ಅಂಶಗಳನ್ನು ಜನರಿಗೆ ತಲುಪಿಸಲು ಆಗಲಿಲ್ಲ. ಹಾಗಾಗಿ ಹಿಂದಕ್ಕೆ ಪಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಇದು ಉತ್ತಮ ನಿರ್ಧಾರ. ವಿರೋಧ ಪಕ್ಷಗಳು, ಪ್ರತಿಭಟನೆ ನಡೆಸುತ್ತಿದ್ದವರು ಈ ಬಗ್ಗೆ ಚರ್ಚೆ ನಡೆಸುವುದಕ್ಕೂ ಸಿದ್ಧರಿರಲಿಲ್ಲ. ಕುಳಿತುಕೊಳ್ಳದೆ ಚರ್ಚೆ ಆಗುತ್ತದೆಯೇ? ಚರ್ಚೆ ಆದಾಗ ಆ ಕಡೆಯಿಂದ ಮತ್ತು ಈ ಕಡೆಯಿಂದ ಉತ್ತಮ ವಿಚಾರಗಳನ್ನು ಪಡೆದುಕೊಳ್ಳಲು ಅವಕಾಶ ಇರುತ್ತದೆ. ಮೋದಿಯವರು ತಿದ್ದುಪಡಿ ಮಾಡುವುದಕ್ಕೆ ಒಪ್ಪಿಕೊಂಡಿದ್ದರು. ಆದರೆ ಇವರು ಯಾವುದಕ್ಕೂ ಒಪ್ಪಲಿಲ್ಲ. ಮೋದಿ ಒಂದು ಹೆಜ್ಜೆ ಹಿಂದಿಟ್ಟಿದ್ದಾರೆ ಅಂದರೆ ಎರಡು ಹೆಜ್ಜೆ ಮುಂದೆ ಇಡುತ್ತಾರೆ ಎಂದೇ ಅರ್ಥ. ಮುಂದಕ್ಕೆ ಬೇರೆ ರೂಪದಲ್ಲಿ ಈ ಕಾಯ್ದೆ ಜಾರಿಗೆ ಬರಲಿದೆ ಎಂದು ಕಲ್ಲಡ್ಕ ಭಟ್ ಹೇಳಿದ್ದಾರೆ.

Join Whatsapp