ಮೋದಿ ಲಕ್ಷ ರೂಪಾಯಿ ಸೂಟ್ ಧರಿಸ್ತಾರೆ, ನಾನು ಬಿಳಿ ಟೀ-ಶರ್ಟ್ ಮಾತ್ರ ಧರಿಸುತ್ತೇನೆ: ರಾಹುಲ್ ಗಾಂಧಿ

Prasthutha|

ಭೋಪಾಲ್: ಪ್ರಧಾನಿ ಮೋದಿ ಅವರು ಲಕ್ಷ ರೂಪಾಯಿ ಸೂಟ್ ಗಳನ್ನು ಧರಿಸುತ್ತಾರೆ. ಆದರೆ ನಾನು ಈ ಬಿಳಿ ಟೀ-ಶರ್ಟ್ ಮಾತ್ರ ಧರಿಸುತ್ತೇನೆ ಎಂದು ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

- Advertisement -


ಮಧ್ಯಪ್ರದೇಶದಲ್ಲಿ ಸತ್ನಾ ದಲ್ಲಿ ಮಾತನಾಡಿದ ಅವರು, ನಾನು ಪ್ರಧಾನಿ ಮೋದಿಯವರ ಭಾಷಣ ಕೇಳಿದ್ದೇನೆ. ಅವರು ಪ್ರತಿ ಭಾಷಣದಲ್ಲಿ ನಾನು ಒಬಿಸಿ ಸಮುದಾಯದವನು ಎಂದು ಎಲ್ಲೆಡೆ ಹೇಳುತ್ತಿದ್ದಾರೆ. ಪದೇ ಪದೇ ಹೇಳುವ ಮೂಲಕ ಅವರು ಪ್ರಧಾನಿಯಾದರು. ಅಂಥವರು ಲಕ್ಷ ರೂಪಾಯಿ ಬೆಲೆ ಬಾಳುವ ಸೂಟ್ ಧರಿಸುತ್ತಾರೆ. ಒಮ್ಮೆ ಬಳಸಿದ ಬಟ್ಟೆಯನ್ನು ಮತ್ತೊಮ್ಮೆ ಬಳಸಿದ್ದನ್ನು ನೀವು ಎಂದಾದರು ನೋಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.




Join Whatsapp