ಅಂದು ಮೋದಿ ಕಾರ್ಯಕ್ರಮದ ಆಯೋಜಕ: ಇಂದು ಪ್ರವೇಶ ಪಡೆಯಲು ಹೆಣಗಾಟ

Prasthutha|

ಮಂಗಳೂರು: ಇಂದು ಮಂಗಳೂರು ಹೊರವಲಯ ಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ನಡೆದ ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಂದ ಅನಿವಾಸಿ ಉದ್ಯಮಿ ಬಿ.ಆರ್. ಶೆಟ್ಟಿ ಅವರನ್ನು ವಿವಿಐಪಿ ಪ್ರವೇಶದ್ವಾರ ಪೊಲೀಸರು ತಡೆದ ಘಟನೆ ವರದಿಯಾಗಿದೆ.

- Advertisement -

ಇದಕ್ಕೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರ ನಡೆಗೆ ನೆಟ್ಟಿಗರು ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಪ್ರಧಾನಿ ಮೋದಿಯನ್ನು ದುಬೈಗೆ ಕರೆಯಿಸಿದ್ದು ಇದೇ ಶೆಟ್ಟಿ, ಈಗ ಗಣ್ಯರಾದ ಇವರನ್ನೇ ಕಾರ್ಯಕ್ರಮಕ್ಕೆ ಪ್ರವೇಶಿಸದಂತೆ ತಡೆದಿರುವುದು ಬಿ.ಆರ್. ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ನಮ್ಮನ್ನು ಈ ಕಾರ್ಯಕ್ರಮಕ್ಕೆ ಬಿಡದಿದ್ದರೂ ಪರವಾಗಿಲ್ಲ. ಅವರನ್ನು ಒಳಗೆ ಬಿಡುವಂತೆ ಆಗ್ರಹಿಸುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

- Advertisement -

ಈ ಹಿಂದೆ ದುಬೈನಲ್ಲಿ ಬಹುಕೋಟಿ ಆಸ್ತಿಯ ಒಡೆಯ, ಉದ್ಯಮಿ ಬಿ. ಆರ್. ಶೆಟ್ಟಿ ಅವರು, ಯುಎಇಯಲ್ಲಿ ಪ್ರಧಾನಿ ಮೋದಿ ಅವರಿಗೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಇದೀಗ ಉದ್ಯಮಿ ಬಿ.ಆರ್. ಶೆಟ್ಟಿ ಅವರಿಗೆ ಮೋದಿ ಕಾರ್ಯಕ್ರಮಕ್ಕೆ ಪ್ರವೇಶ ನಿರಾಕರಿಸಿರುವುದು ಬೆಂಬಲಿಗರ ಆಕೋಶಕ್ಕೆ ಕಾರಣವಾಗಿದೆ.

ಯುಎಇ ಯಲ್ಲಿ ಹಲವಾರು ಸಂಸ್ಥೆ ಗಳನ್ನು ನಡೆಸುತ್ತಿದ್ದ ಬಿ.ಆರ್. ಶೆಟ್ಟಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಎಇ ಯಿಂದ ತಲೆಮರೆಸಿಕೊಂಡಿದ್ದರು. ಸದ್ಯ ಮಂಗಳೂರಿನಲ್ಲಿ ನೆಲೆಸಿರುವ ಬಿ.ಆರ್. ಶೆಟ್ಟಿ ಅವರು ಇಂದು ನಡೆದ ಮೋದಿ ಕಾರ್ಯಕ್ರಮಕ್ಕೆ ಬಂದು ಒಳಗೆ ಪ್ರವೇಶಿಸಲಾಗದೇ ಹೊರಗೆ ನಿಂತಿದ್ದರು.



Join Whatsapp