ಮೋದಿ ಟ್ವಿಟರ್‌‌ ಖಾತೆ ಹ್ಯಾಕ್‌: ಬಿಟ್ ಕಾಯಿನ್ ಬಗ್ಗೆ ನಕಲಿ ಪೋಸ್ಟ್

Prasthutha|

ನವದೆಹಲಿ: ಪ್ರಧಾನಿ ಮೋದಿಯವರ ಅಧಿಕೃತ ಟ್ವಿಟರ್‌ ಖಾತೆಯನ್ನು ಕಿಡಿಗೇಡಿಗಳು ಹ್ಯಾಕ್‌ ಮಾಡಿ, ಬಿಟ್‌ ಕಾಯಿನ್ ಲೀಗಲ್ ಟೆಂಡರ್‌ ಮಾಡಲಾಗಿದೆ ಎಂದು ಪೋಸ್ಟ್‌ ಮಾಡಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

- Advertisement -

ಭಾರತದಲ್ಲಿ ಬಿಟ್ ಕಾಯಿನ್ ಚಲಾವಣೆ ಕಾನೂನುಬದ್ಧ, ಸರ್ಕಾರ ಅಧಿಕೃತವಾಗಿ 500 ಬಿಟ್ ಕಾಯಿನ್ ಖರೀದಿಸಿದೆ, ಅವುಗಳನ್ನು ದೇಶದ ಪ್ರಜೆಗಳಿಗೆ ಹಂಚುವುದಾಗಿ ಪ್ರಧಾನಿ ಮೋದಿ ಖಾತೆಯಿಂದ ಟ್ವೀಟ್ ಮಾಡಲಾಗಿತ್ತು.

- Advertisement -

ಈ ಬಗ್ಗೆ ಕೂಡಲೇ ಟ್ವಿಟರ್ ಸಂಸ್ಥೆಗೆ ಮಾಹಿತಿ ನೀಡಿದ್ದು, ತಕ್ಷಣವೇ ಪ್ರಧಾನಿ ಮೋದಿ ಟ್ವಿಟರ್ ನಿಂದ, ಮಾಡಲಾಗಿದ್ದ ನಕಲಿ ಪೋಸ್ಟ್ ಡಿಲೀಟ್ ಮಾಡಲಾಗಿದೆ.

ಹ್ಯಾಕರ್ ಗಳು ಮಾಡಿರುವ ಟ್ವೀಟ್ ಪರಿಗಣಿಸದಂತೆ ‘ಪ್ರೈಮ್‌ ಮಿನಿಸ್ಟರ್‌ ಆಫ್ ಇಂಡಿಯಾ’ (PMO India) ಟ್ವಿಟರ್‌ ಖಾತೆಯ ಮೂಲಕ ಸ್ಪಷ್ಟನೆ ನೀಡಿದ್ದು, ಪ್ರಧಾನಿ ಖಾತೆಯಿಂದ ಲಿಂಕ್ ಶೇರ್ ಆದರೆ ಅದನ್ನು ಪರಿಗಣಿಸಬೇಡಿ. ಬಿಟ್ ಕಾಯಿನ್ ಕುರಿತು ಯಾವುದಾದರೂ ಲಿಂಕ್ ಬಂದರೆ ಪರಿಗಣಿಸಬೇಡಿ ಎಂದು ಸ್ಪಷ್ಟನೆ ನೀಡಲಾಗಿದೆ.



Join Whatsapp