ಕಳೆದ ವರ್ಷಕ್ಕಿಂತ ಶ್ರೀಮಂತರಾದ ಮೋದಿ; ಇಲ್ಲಿದೆ ಪ್ರಧಾನಿಯವರ ಆಸ್ತಿ ಮಾಹಿತಿ!

Prasthutha|

ಹೊಸದಿಲ್ಲಿ: ನರೇಂದ್ರ ಮೋದಿಯವರ ಆಸ್ತಿಯಲ್ಲಿ ಗಣನೀಯ ಹೆಚ್ಚಳ ಕಂಡಿದ್ದು, ಪ್ರಧಾನಿಯವರ ವೆಬ್ ಸೈಟ್ ಪ್ರಕಾರ, ಮೋದಿ ಆಸ್ತಿ 3.07 ಕೋಟಿ ಹೆಚ್ಚಳವಾಗಿದೆ.

ಕಳೆದ ವರ್ಷ ಮೋದಿ ಆಸ್ತಿ 2.85 ಕೋಟಿ ರೂ. ಆಗಿತ್ತು. ಇದೀಗ ಒಂದು ವರ್ಷದಲ್ಲಿ 22 ಲಕ್ಷ ರೂ. ಹೆಚ್ಚಳವಾಗಿದೆ.  ಮಾರ್ಚ್ 31 ರ ಹೊತ್ತಿಗೆ, ಮೋದಿ ಬ್ಯಾಂಕ್ ಬ್ಯಾಲೆನ್ಸ್ 1.5 ಲಕ್ಷ ರೂ. ಇತ್ತು. 36,000 ರೂಪಾಯಿ ನಗದು ಕೂಡ ಇತ್ತು.

- Advertisement -

ಗುಜರಾತಿನ ಗಾಂಧಿನಗರ ಶಾಖೆಯಲ್ಲಿ ಸ್ಥಿರ ಹೂಡಿಕೆಯ ಹೆಚ್ಚಳವು ಮೋದಿಯ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಗಾಂಧಿನಗರ SBINSC ಶಾಖೆಯಲ್ಲಿ ಸ್ಥಿರ ಹೂಡಿಕೆ ರೂ 1.6 ಕೋಟಿಯಿಂದ ರೂ 1.86 ಕೋಟಿಗೆ ಹೆಚ್ಚಾಗಿದೆ. ಮೋದಿ ಷೇರು ಮಾರುಕಟ್ಟೆ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ.

ಅವರು ರಾಷ್ಟ್ರೀಯ ಸೇವಿಂಗ್ಸ್ ಸರ್ಟಿಫಿಕೇಟ್ ನಲ್ಲಿ ರೂ .8,93,251 ಠೇವಣಿ ಹೊಂದಿದ್ದಾರೆ. ಅವರು 1,50,957 ರೂಗಳನ್ನು ವಿಮೆಯಲ್ಲಿ ಮತ್ತು 20,000 ರೂಗಳನ್ನು ಎಲ್ & ಟಿ ಇನ್ಫ್ರಾಸ್ಟ್ರಕ್ಷರ್ ಬಾಂಡ್‌ಗಳಲ್ಲಿ ಹೂಡಿಕೆ ಮಾಡಿದ್ದಾರೆ. 1.48 ಲಕ್ಷ ಮೌಲ್ಯದ ಎರಡು ಚಿನ್ನದ ಉಂಗುರಗಳನ್ನು ಮೋದಿ ಹೊಂದಿದ್ದಾರೆ.

- Advertisement -