ಮಾಡಿದ್ದ ಆರೋಪವನ್ನು ಪುನರುಚ್ಚರಿಸಿದ ಮೋದಿ

Prasthutha|

ಅಲೀಗಢ: ರವಿವಾರ ರಾಜಸ್ಥಾನದಲ್ಲಿ ಮಾಡಿದ ಭಾಷಣದ ಬಗ್ಗೆ ವಿರೋಧ ಪಕ್ಷಗಳ ಖಂಡನೆ, ಟೀಕೆ, ದೂರುಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ, ತಾವು ಮಾಡಿದ್ದ ಆರೋಪವನ್ನು ಪುನರುಚ್ಚರಿಸಿದ್ದಾರೆ.ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನರ ಸಂಪತ್ತನ್ನು ಮರುಹಂಚಿಕೆ ಮಾಡುತ್ತದೆ, ಮಂಗಳಸೂತ್ರವನ್ನೂ ಒಳಗೊಂಡಂತೆ ಜನರ ಚಿನ್ನವನ್ನು ಕಸಿದುಕೊಳ್ಳುತ್ತದೆ ಎಂದು ಸೋಮವಾರವೂ ಹೇಳಿಕೆ ನೀಡಿದ್ದಾರೆ.

- Advertisement -

ಉತ್ತರ ಪ್ರದೇಶದ ಅಲೀಗಢದಲ್ಲಿ ಸೋಮವಾರ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ, ಸಂಪತ್ತು ಮುಸ್ಲಿಮರಿಗೆ ಹೋಗುತ್ತದೆ ಎನ್ನುವುದನ್ನು ಈ ಬಾರಿ ಅವರು ಪುನರುಚ್ಚಲಿಲ್ಲ ಎಂಬುದನ್ನು ಬಿಟ್ಟರೆ ಅದೇ ರೀತಿ ವಿವಾದಾಸ್ಪದವಾಗಿ ಮಾತನಾಡಿದ್ದಾರೆ.

ಮುಂದುವರೆದು ಮಾತನಾಡಿದ ಪ್ರಧಾನಿ, ಸುಮ್ಮನೆ ಯೋಚಿಸಿ, ನಮ್ಮ ತಾಯಂದಿರು ಮತ್ತು ಹೆಣ್ಣುಮಕ್ಕಳ ಬಳಿ ಚಿನ್ನ ಇದೆ. ಅದು ‘ಸ್ತ್ರೀಧನ’. ಅದನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಅದಕ್ಕೆ ಕಾನೂನಿನ ರಕ್ಷಣೆಯೂ ಇದೆ. ಈಗ ಅವರು ಕಾನೂನು ಬದಲಾಯಿಸಲು ಹೊರಟಿದ್ದು, ನಮ್ಮ ತಾಯಂದಿರು ಮತ್ತು ಸಹೋದರಿಯರ ಆಸ್ತಿ ಕಿತ್ತುಕೊಳ್ಳಲು ಹೊರಟಿದ್ದಾರೆ ಎಂದು ಹೇಳಿದ್ದಾರೆ.

- Advertisement -

.

‘ವಿರೋಧ ಪಕ್ಷವು ಸಂಬಳದಾರರ ಆಸ್ತಿ ಸಮೀಕ್ಷೆಗೆ ಚಿಂತನೆ ನಡೆಸಿದ್ದು, ನಿಮ್ಮ ಬಳಿ ಎರಡು ಮನೆ ಇದ್ದರೆ, ಅದು ಒಂದನ್ನು ಕಿತ್ತುಕೊಳ್ಳುತ್ತದೆ. ಕಾಂಗ್ರೆಸ್ ಅಷ್ಟು ದೂರ ಹೋಗಲಿದೆ’ ಎಂದು ಹೇಳಿದರು. ಇದು ಮಾವೊವಾದಿ ಚಿಂತನೆ, ಇದು ಕಮ್ಯುನಿಸ್ಟ್ ಚಿಂತನೆ. ಹೀಗೆ ಮಾಡುವ ಮೂಲಕ ಕಮ್ಯುನಿಸ್ಟರು ಅನೇಕ ರಾಷ್ಟ್ರಗಳನ್ನು ನಾಶ ಮಾಡಿದರು. ಈಗ ಕಾಂಗ್ರೆಸ್ ಮತ್ತು ‘ಇಂಡಿಯಾ’ ಕೂಟ ಅದನ್ನು ಭಾರತದಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದೆ’ ಎಂದು ಪ್ರಧಾನಿ ಆರೋಪಿಸಿದರು.

Join Whatsapp