ನೀವು ಒಂದೇ ಬಾರಿಗೆ ಎಷ್ಟು ಪುಶ್ ಅಪ್ ಗಳನ್ನು ಮಾಡುತ್ತೀರಿ ಎಂದು ಪ್ರಶ್ನಿಸಿದ ಮೋದಿ

Prasthutha|

ಹೊಸದಿಲ್ಲಿ: ನೀವು ಒಂದೇ ಬಾರಿಗೆ ಎಷ್ಟು ಪುಶ್ ಅಪ್ ಗಳನ್ನು ಮಾಡುತ್ತೀರಿ ಎಂದು ಮಣಿಪುರದ ಯುವಕನೊಬ್ಬನಿಗೆ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಪ್ರಶ್ನಿಸಿದ್ದಾರೆ.

- Advertisement -

“ಈಗ ನಾನು ವಿಶೇಷವಾಗಿ ಯುವಕರಿಗೆ ಒಂದು ಪ್ರಶ್ನೆಯನ್ನು ಕೇಳಲು ಬಯಸುತ್ತೇನೆ. ಒಂದೇ ಬಾರಿಗೆ ನೀವು ಎಷ್ಟು ಪುಶ್ ಅಪ್ಗಳನ್ನು ಮಾಡಬಹುದು? ಮಣಿಪುರದಲ್ಲಿ 24 ವರ್ಷದ ಯುವಕ ನಿರಂಜೋಯ್ ಒಂದು ನಿಮಿಷದಲ್ಲಿ 109 ಪುಶ್ ಅಪ್ಗಳನ್ನು ಮಾಡಿ ದಾಖಲೆ ನಿರ್ಮಿಸಿದ್ದಾರೆ.

ಈ ಹಿಂದೆಯೂ ಒಂದೇ ನಿಮಿಷದಲ್ಲಿ ಒನ್ ಹ್ಯಾಂಡ್ ಕಾಪಿ ಪುಶ್ ಅಪ್ ಮಾಡಿ ದಾಖಲೆ ನಿರ್ಮಿಸಿದ್ದರು. ಈ ವಿಷಯ ಪ್ರಸ್ತಾಪದಿಂದಾಗಿ ನೀವೆಲ್ಲ ನಿರಂಜೋಯ್ ಅವರಿಂದ ಪ್ರೇರಣೆ ಪಡೆಯುತ್ತೀರಿ” ಎಂದು ಪ್ರಧಾನಿ ಹೇಳಿದರು.

Join Whatsapp